Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿಯೊಂದು ದೇಶದಲ್ಲಿ ಸಾಂಪ್ರದಾಯಿಕ ಆರೋಗ್ಯದ ಸೂತ್ರಗಳಿವೆ: ಡಾ.ವೆಂಕಟ ನಾರಾಯಣ ಜೋಶಿ

ಬಳ್ಳಾರಿ,ಜ.03

ಪ್ರತಿ ದೇಶಕ್ಕೂ ತಮ್ಮದೇ ಆದ ಸಾಂಪ್ರದಾಯಿಕ ಆರೋಗ್ಯದ ಸೂತ್ರಗಳಿವೆ. 95ಕ್ಕೂ ಹೆಚ್ಚು ಪಶ್ಚಿಮ ದೇಶಗಳಲ್ಲಿ ವಿವಿಧ ಔಷಧ ದ್ರವ್ಯಗಳ ವ್ಯಾಪಾರ ವಹಿವಾಟು ನಡೆಯುತ್ತಿವೆ ಎಂದು ಲಂಡನ್ ಆಯುರ್ವೇದ ಅಕಾಡೆಮಿಯ ನಿರ್ದೇಶಕ ಡಾ.ವೆಂಕಟ ನಾರಾಯಣ ಜೋಶಿ ಅವರು ಹೇಳಿದರು.
ತಾರಾನಾಥ ಹಳೆಯ ವಿದ್ಯಾರ್ಥಿಗಳ ಸಂಘ, ನಿಮಾ ಬಳ್ಳಾರಿ ಮತ್ತು ನಿಮಾ ಮಹಿಳಾ ವೇದಿಕೆ ಸಹಭಾಗಿತ್ವದಲ್ಲಿ ನಗರದ ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಮಂಥನ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ “ಯುರೋಪ್ ಮತ್ತು ಯುಕೆಯಲ್ಲಿ ಆಯುರ್ವೇದ” ವಿಷಯದ ಮೇಲೆ ಒಂದು ದಿನದ “ತಜ್ಞರ ತರಬೇತಿ ಕಾರ್ಯಕ್ರಮ”ದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪಶ್ಚಿಮ ದೇಶಗಳಲ್ಲಿ ಶಿವಲಿಂಗಿ ಮತ್ತು ಪುತ್ರಂಜೀವ ಬೀಜಗಳ ಸಂರಕ್ಷಣೆ ಮತ್ತು ಮಾರಾಟ ಮಾಡಲಾಗುತ್ತಿದೆ. ದೇವದಾರುವಿನ ಸುಗಂಧ ಸಾರವನ್ನು ಪುರುಷ ಬಂಜೆತನದಲ್ಲಿ ಉತ್ತರ ಬಸ್ತಿಯ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಮೃತ ಸತ್ವವು ಏಡ್ಸ್ ಚಿಕಿತ್ಸೆಯಲ್ಲಿ ಸಹಾಯಕವಾಗಿದೆ. ನಿರ್ಗುಂಡಿ, ಕಡಲ ಬೆಳ್ಳುಳ್ಳಿ ಮತ್ತು ಮರಿಚಾ ಇತ್ಯಾದಿ ಔಷಧೀಯ ಸಸ್ಯಗಳು ಯೂರೋಪ್‌ನಲ್ಲಿ ಲಭ್ಯವಿವೆ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ತಯಾರಿಸಲಾದ ಸ್ವಯಂ ಔಷಧಿಗಳು ಪರಿಣಾಮಕಾರಿಯಾಗಿವೆ ಎಂದರು.
ಲಂಡನ್ ಮತ್ತು ಯುಕೆಯಲ್ಲಿ ಆಯುರ್ವೇದದ ವ್ಯಾಪ್ತಿ ಮತ್ತು ವಿಶ್ವಮಟ್ಟದ ಆರೋಗ್ಯ ಸೇವೆಗಳ ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದಲ್ಲಿ ನೂತನವಾಗಿ ಅನುಸಂಧಾನ, ಹೊಸಪರಿಕಲ್ಪನೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಲಾಯಿತು.
ಈ ವೇಳೆ ಆಯುಷ್ ಇಲಾಖೆಯ ಮಾಜಿ ಜಂಟಿ ನಿರ್ದೇಶಕ ಡಾ.ಎನ್.ಎ.ಮೂರ್ತಿ, ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ.ಜಿ.ಆರ್.ವಸ್ತçದ್, ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಮಾಧವ ದಿಗ್ಗಾವಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ತಿತರಿದ್ದರು.
-----------

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣ