Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಕ್ಷ್ಮಿಗೋಲ್ಡ್ ಖಜಾನಾ ಪ್ರೈ.ಲಿಮಿಟೆಗೆ ದಂಡ ವಿಧಿಸಿ ಮತ್ತು ಪರಿಹಾರಕ್ಕೆ ಆದೇಶ





ಧಾರವಾಡ  ಆ.04: ಧಾರವಾಡದ ಸಾಯಿ ನಗರದ ನಿವಾಸಿ ಸರಸ್ವತಿ ಚಬ್ಬಿ ಎನ್ನುವರು ಧಾರವಾಡನಲ್ಲಿರುವ ಎದುರುದಾರ ಲಕ್ಷ್ಮಿಗೋಲ್ಡ್ ಖಜಾನಾರವರಲ್ಲಿ ಗೋಲ್ಡ್ ಸ್ಕೀಮಿಗೆ ಸದಸ್ಯರಾಗಿದ್ದರು. ಅದರಂತೆ ದೂರುದಾರರು ಪ್ರತಿ ತಿಂಗಳು ರೂ:5,000 ರಂತೆ ಒಟ್ಟು ರೂ:90,000 18 ಕಂತುಗಳಲ್ಲಿ ದಿ:10.04.2017 ರಿಂದ 09.02.2022 ವರೆಗೆ ಪಾವತಿಸಿದ್ದರು. ಗೋಲ್ಡ್ ಸ್ಕೀಮ್ ಪ್ರಕಾರ ಎದುರುದಾರರ ಲಕ್ಷ್ಮಿಗೋಲ್ಡ್ ಖಜಾನಾರವರು ರೂ:90,000 ಮೊತ್ತದ ಬಂಗಾರದ ಆಭರಣ ದೂರುದಾರರಿಗೆ ಕೊಡಬೇಕಾಗಿತ್ತು. ಆದರೆ ದೂರುದಾರರು ಕೆಲ ತಿಂಗಳುಗಳ ಹಣವನ್ನು ಸರಿಯಾಗಿ ಪಾವತಿಸಿಲ್ಲ ಅನ್ನುವ ಕಾರಣ ಹೇಳಿ ಚಿನ್ನದ ಆಭರಣ ಕೊಡಲು ನಿರಾಕರಿಸಿದ್ದರು. ಹಲವು ಬಾರಿ ದೂರುದಾರರು ಬಂಗಾರದ ಆಭರಣ ಕೊಡುವಂತೆ ಒತ್ತಾಯಿಸಿದರೂ ಅವುಗಳನ್ನು ಕೊಡದೆ ಎದುರುದಾರರು ಸತಾಯಿಸುತ್ತಿದ್ದರು. ಧಾರವಾಡದ ಲಕ್ಷ್ಮೀ ಗೋಲ್ಡ ಖಜಾನೆಯವರ ಇಂತಹ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ: 27/02/2024 ರಂದು ದೂರನ್ನು ಸಲ್ಲಿಸಿದ್ದರು. 18 ಕಂತುಗಳ ಹಣವನ್ನು ದೂರುದಾರರು ಪ್ರತಿ ತಿಂಗಳು ಕ್ರಮವಾಗಿ ಕಟ್ಟದೆ ಕೇಲವು ತಿಂಗಳು ಬಿಟ್ಟು ನಂತರ ಕಟ್ಟಿರುವುದರಿಂದ ಸ್ಕೀಮಿನ ಪ್ರಕಾರ ಬಂಗಾರದ ಆಭರಣ ಕೊಡಲು ಬರುವುದಿಲ್ಲ ಅಂತಾ ಲಕ್ಷ್ಮೀ ಗೋಲ್ಡ ಖಜಾನೆಯವರು ಆಕ್ಷೇಪಣೆ ಎತ್ತಿದ್ದರು.



ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರ ಸ್ಕೀಮಿನಲ್ಲಿ ಸದಸ್ಯರಾಗಿ ಒಂದೆರೆಡು ತಿಂಗಳು ವಿಳಂಬವಾಗಿ ಸ್ಕೀಮಿನ ಹಣ ಪ್ರತಿ ತಿಂಗಳು ರೂ:5,000 ರಂತೆ ಒಟ್ಟು ರೂ:90,000 ಗಳನ್ನು ಪಾವತಿಸಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಎದುರುದಾರರು ದೂರುದಾರರಿಗೆ ಕೊಟ್ಟ ರಶೀದಿಗಳು ಸಾಕ್ಷಿಗಳಾಗಿವೆ. ಸ್ಕೀಮಿನ ಹಣಕಟ್ಟುವಲ್ಲಿ ದೂರುದಾರರು ವಿಳಂಬ ಮಾಡಿ ಷರತ್ತುನ್ನು ಉಲ್ಲಂಘಿಸಿದ್ದರೆ ಆಯಾ ಹಂತದಲ್ಲೆ ದೂರುದಾರರಿಂದ ಹಣ ಪಡೆಯದೆ ಅವರಿಗೆ ಹಿಂದಿರುಗಿಸ ಬೇಕಾಗಿತ್ತು. ಬಾಕಿ ಕಂತುಗಳ ಹಣವನ್ನು ದೂರುದಾರರಿಂದ ಪಡೆದುಕೊಳ್ಳಬಾರದಿತ್ತು. ಆದರೆ ಎದುರುದಾರರು ಎಲ್ಲ 18 ಕಂತುಗಳ ರೂ:90,000 ಹಣವನ್ನು ದೂರುದಾರರಿಂದ ಪಡೆದಿದ್ದಾರೆ. ನಂತರ ದೂರುದಾರರಿಗೆ ಆ ಮೊತ್ತದ ಬಂಗಾರದ ಆಭರಣಗಳನ್ನು ಕೊಡದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತ ಆಯೋಗ ಅಭಿಪ್ರಾಯ ಪಟ್ಟುತೀರ್ಪು ನೀಡಿದೆ.



ಈ ಎಲ್ಲ ಸಂಗತಿಗಳನ್ನು ಆಧರಿಸಿ ದೂರುದಾರರು ಎದುರುದಾರರಿಗೆ ಪಾವತಿಸಿದ ಒಟ್ಟು 18 ಕಂತುಗಳ ಮೊತ್ತ ರೂ:90,000 ಮೌಲ್ಯದ ಬಂಗಾರದ ಆಭರಣಗಳನ್ನು ಸ್ಕೀಮಿನ ನಿಯಮದಂತೆ ಆದೇಶವಾದ 15 ದಿನಗಳ ಒಳಗಾಗಿ ಕೊಡುವಂತೆ ಧಾರವಾಡದ ಲಕ್ಷ್ಮೀ ಗೋಲ್ಡ ಖಜಾನೆಯವರಿಗೆ ಆದೇಶಿಸಿದೆ. ಅಲ್ಲದೇ ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ.15,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ಕೋಡುವಂತೆ ಲಕ್ಷ್ಮೀಗೋಲ್ಡ್ ಖಜಾನಾ ಪ್ರೈ.ಲಿ.ಗೆ ಆಯೋಗ ನಿರ್ದೇಶಿಸಿದೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ