ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ; ರಾಧಾ-ಕೃಷ್ಣ ವೇಷ ಧರಿಸಿದ ಚಿಣ್ಣರು
ಸಿರುಗುಪ್ಪ : ಆ 25 ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ವಿಶ್ವಜ್ಯೋತಿ ಮಾಂಟಸಾರಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ರವಿವಾರ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ತೆಕ್ಕಲಕೋಟೆಯ ವಿಶ್ವಜ್ಯೋತಿ ಮಾಂಟಸಾರಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಆವರಣದಲ್ಲಿ ಶಾಲೆಯ ಮಕ್ಕಳು ರಾಧಾ, ಕೃಷ್ಣನ ವೇಷ ಧರಿಸಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಿದರು.
ಮಕ್ಕಳು ವೇಷವನ್ನು ಧರಿಸಿ ನೃತ್ತ್ಯ ಮತ್ತು ತುಂಟ ಕೃಷ್ಣನ ಲೀಲೆಗಳನ್ನು ಪ್ರದರ್ಶಿಸಿದರು, ತಾಯಂದಿರು ಯಶೋದೆ ವೇಷಧರಿಸಿ ಮಕ್ಕಳೊಂದಿಗೆ ಭಾಗವಹಿಸಿದರು. ಶಾಲಾ ಆಡಳಿತ ಮಂಡಳಿ ಮಕ್ಕಳ ವೇಷ ಬೂಷಣ, ಕೌಶಲ್ಯಗಳ ಆಧರಿಸಿ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಮತ್ತು ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು.
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.