ಸಿರುಗುಪ್ಪ: ಆಲಿಕಲ್ಲು ಸಮೇತ ಮಳೆ, ಬಿಸಿಗೆ ತಾತ್ಕಾಲಿಕ ವಿರಾಮ
ಸಿರುಗುಪ್ಪ, ಮಾ. 17: ಬಿರುಬಿಸಿಲಿನಿಂದ ಕೆಂಡದಂತಾಗಿದ್ದ ಭೂಮಿಗೆ ಮಂಗಳವಾರ ಸಂಜೆ ಸುರಿದ ಆಲಿಕಲ್ಲು ಸಮೇತ ಜೋರಾದ ಮಳೆಯು ತಾತ್ಕಾಲಿಕ ಶಮನ ತಂದಿದೆ.
ಮಂಗಳವಾರ ಬೆಳಿಗ್ಗೆಯಿಂದಲು ಎಂದಿಗಿಂತಲೂ ಕಡಿಮೆ ತಾಪಮಾನ ಕಂಡುಬಂದಿದ್ದು, ಸಂಜೆಯಾಗುತ್ತಿದ್ದಂತೆಯೇ ಗಾಳಿ, ಗುಡುಗು ಹಾಗೂ ಸಿಡಿಲಿನ ಆರ್ಭಟ ದೊಂದಿಗೆ ಮಳೆ ಆರಂಭವಾಯಿತು.
ತಾಲೂಕಿನ ಸಿರುಗುಪ್ಪ ನಗರ ಸೇರಿದಂತೆ ಅಗಸನೂರು, ಇಬ್ರಾಹಿಂಪುರ, ಬಾಗೇವಾಡಿ, ರಾರಾವಿ, ಬಗ್ಗೂರು,ಚಾಣಕನೂರು, ಕರ್ಚಿಗನೂರು ಬಂಡ್ರಾಳ, ಶಾಲಿಗನೂರು ಹಾಗೂ ಪೊಪ್ಪನಾಳ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿರುವುದು ವರದಿಯಾಗಿದೆ.
ಮಳೆಯ ಪರಿಣಾಮವಾಗಿ ವಾತಾವರಣ ತಂಪಾಗಿದ್ದು, ಬಿಸಿಯಿಂದ ಬಳಲುತ್ತಿದ್ದ ಜನರು ನಿರಾಳರಾಗಿದ್ದಾರೆ. .
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.