Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಗಸ್ಟ್ 15ರಿಂದ ಕೊಪ್ಪಳದಲ್ಲಿ 10ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನ

----
ಕೊಪ್ಪಳ ಜುಲೈ 31ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ತೋಟಗಾರಿಕೆ ಇಲಾಖೆ ವತಿಯಿಂದ 2026-27ನೇ ಸಾಲಿನ 10ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2026 ಅನ್ನು ಆಗಸ್ಟ್ 15 ರಿಂದ 20ರವರೆಗೆ ಆರು ದಿನಗಳ ಕಾಲ ಜಿಲ್ಲಾ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದೆ.
ಅಭಿಯಾನದ ಅಂಗವಾಗಿ ರೈತರು ಹಾಗೂ ಸಾರ್ವಜನಿಕರಿಗೆ ಒಣ ತೋಟಗಾರಿಕೆ ಬೇಸಾಯ, ಬರ ನಿರ್ವಹಣೆ, ಹೊಸ ತಂತ್ರಜ್ಞಾನಗಳು, ನೂತನ ತಳಿಗಳ ಪರಿಚಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಅಲ್ಲದೆ, ಮಾವು, ತೆಂಗು, ಪೇರಲ, ಚಿಕ್ಕು, ಅಂಜೂರ, ಕರಿಬೇವು, ನುಗ್ಗೆ, ದ್ರಾಕ್ಷಿ ಸೇರಿದಂತೆ ವಿವಿಧ ಹಣ್ಣಿನ ಕಸಿ ಸಸಿಗಳು, ಅಲಂಕಾರಿಕ, ಹೂವಿನ, ತರಕಾರಿ, ಔಷಧೀಯ ಹಾಗೂ ಸಾಂಬಾರು ಸಸ್ಯಗಳನ್ನು ಇಲಾಖೆಯ ನಿಗದಿತ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಈ ಬಾರಿಯ ಸಸ್ಯಸಂತೆಯ ವಿಶೇಷ ಆಕರ್ಷಣೆಯಾಗಿ ಜಗತ್ತಿನ ದುಬಾರಿ ಮಿಯಾಜಾಕಿ ಮಾವಿನ ಕಸಿ ಸಸಿಗಳು ಹಾಗೂ ಮೆಕಡೋನಿಯಾ (Macadamia) ನಟ್ ಕಸಿ ಸಸಿಗಳು ಸೇರಿದಂತೆ ದೇಶಿ-ವಿದೇಶಿ ಅಪರೂಪದ ಹಣ್ಣಿನ ಮತ್ತು ಹೂವಿನ ಸಸಿಗಳನ್ನೂ ಲಭ್ಯವಾಗುವಂತೆ ಮಾಡಲಾಗಿದೆ.
ಅಭಿಯಾನದಲ್ಲಿ ಸಮಗ್ರ ಖುಷ್ಕಿ ತೋಟಗಾರಿಕೆ, ಅಪ್ರಧಾನ ಹಾಗೂ ವಿದೇಶಿ ಹಣ್ಣುಗಳ ಕೃಷಿ, ಸಮುದಾಯ ತೋಟಗಾರಿಕೆ, ಬಾಳೆ ಮತ್ತು ಹಲಸು ಬೆಳೆಗಳ ಒಪ್ಪಂದ ಕೃಷಿ, ಬ್ಯಾಂಕ್ ಸಾಲ ಸೌಲಭ್ಯ, ಬೆಳೆ ವಿಮೆ, ಸಾವಯವ ಕೃಷಿ ಹಾಗೂ ಸಾವಯವ ಪ್ರಮಾಣೀಕರಣ ಕುರಿತು ಮಾಹಿತಿ ನೀಡಲಾಗುತ್ತದೆ.
ಇದರ ಜೊತೆಗೆ ಇಲಾಖೆಯ ವಿವಿಧ ಯೋಜನೆಗಳು, ಗುಣಮಟ್ಟದ ಸಸಿಗಳು, ಎರೆಹುಳು ಗೊಬ್ಬರ, ಜೈವಿಕ ಗೊಬ್ಬರ, ಹನಿ ನೀರಾವರಿ, ಇಸ್ರೇಲ್ ಮಾದರಿಯ ತಂತ್ರಜ್ಞಾನ, ಜೇನು ಸಾಕಾಣಿಕೆ, ಅಣಬೆ ಬೇಸಾಯ, ಮೌಲ್ಯವರ್ಧನೆ, ಕೈತೋಟ, ತಾರಸಿ ತೋಟ, ವರ್ಟಿಕಲ್ ತೋಟ, ತೋಟಗಾರಿಕೆ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ ಅವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ತೋಟಗಾರಿಕೆ ಇಲಾಖೆ, ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾ.ವ.), ಕೊಪ್ಪಳ ಅವರನ್ನು 9483284926 ಹಾಗೂ 8660412770 ಸಂಖ್ಯೆಗಳ ಮೂಲಕ ಅಥವಾ ಸಂಬಂಧಿಸಿದ ತಾಲ್ಲೂಕು ತೋಟಗಾರಿಕೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಗಸ್ಟ್ 15ರಿಂದ ಕೊಪ್ಪಳದಲ್ಲಿ 10ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನಕುಡತಿನಿ: ಕಟ್ಟಡ ತ್ಯಾಜ್ಯ ಎಲ್ಲೆಂದರಲ್ಲಿ ಚೆಲ್ಲಿದರೆ, ನಿಷೇಧಿತ ಪ್ಲಾಸ್ಟಿಕ್ ಬಳಸಿದರೆ ಭಾರೀ ದಂಡದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳುಬಳ್ಳಾರಿ: ಆಗಸ್ಟ್ 2 ರಂದು ಪೊಲೀಸ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿಜಲಾಶಯದ ನೀರು ಇನ್ಮುಂದೆ ಕುಡಿಯಲು ಮಾತ್ರ ಕಾಯ್ದಿರಿಸಲು ಸರಕಾರದ ಆದೇಶ: ರೈತರಿಗೆ ಎಲ್-ನಿನೋ ಎಚ್ಚರಿಕೆಬಳ್ಳಾರಿಯಲ್ಲಿ ಮಹಿಳೆಯರಿಗಾಗಿ 10 ದಿನಗಳ ಉಚಿತ ಉದ್ಯಮಶೀಲತಾ ತರಬೇತಿ: ಅರ್ಜಿ ಆಹ್ವಾನಶೈಕ್ಷಣಿಕ ಶುಲ್ಕ ಮರುಪಾವತಿ ಮತ್ತು ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಗಳಿಗೆ  ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಬಳ್ಳಾರಿಯಲ್ಲಿ ಆ.1 ರಂದು ‘ವ್ಯಸನ ಮುಕ್ತ ದಿನಾಚರಣೆ' ಕಾರ್ಯಕ್ರಮ ಮತ್ತು ಜಾಗೃತಿ ಜಾಥಾಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮೇಯರ್ ಪಿ.ಗಾದೆಪ್ಪ ಹೇಳಿಕೆ ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕೆ ಅಗತ್ಯಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ಜುಲೈ 29 ಇದ್ದಂತೆ ಶೇ. 100 ಮತದಾರರಿಗೆ ಗಣತಿ ನಮೂನೆಗಳ ವಿತರಣೆ