Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೀಟಜನ್ಯ ರೋಗಗಳ ಬಗ್ಗೆ ತರಬೇತಿ ಕಾರ್ಯಾಗಾರ

ಚಿತ್ರದುರ್ಗಫೆ.22:

ಚಿತ್ರದುರ್ಗ ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಲೇರಿಯಾ ಹಾಗೂ ಇತರೆ ಕೀಟಜನ್ಯ ರೋಗಗಳ ಬಗ್ಗೆ ಜಿಲ್ಲೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ ಒಂದು ತರಬೇತಿ ಕಾರ್ಯಾಗಾರ ನಡೆಯಿತು.

ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣಪ್ರಸಾದ್ ಉದ್ಘಾಟಿಸಿ ಮಾತನಾಡಿದ ಅವರು, 2025ಕ್ಕೆ ಮಲೇರಿಯಾ ರೋಗವನ್ನು ನಿರ್ಮೂನೆ ಮಾಡಲು ಕ್ಷೇತ್ರಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಲಹೆ ನೀಡಿದರು.

ತರಬೇತಿ ಕಾರ್ಯಗಾರದಲ್ಲಿ ಎನ್‌ವಿಬಿಡಿಸಿಪಿ ಸಹ ನಿರ್ದೇಶಕ ಡಾ.ಮಹಮದ್ ಶರೀದ್, ರಾಜ್ಯ ಕೀಟಶಾಸ್ತ್ರಜ್ಞರಾದ ಭಾವನ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶಿ, ಜಿಲ್ಲಾ ಸಹಾಯಕ ಶಾಸ್ತ್ರಜ್ಞರಾದ ನಂದಿನಿಕಡಿ, ಶ್ರೀಬಾರ್ಕಿ ಮತ್ತು ಶ್ರೀಕಾಂತ್, ಚಿತ್ರದುರ್ಗ ಡಿ.ವಿ.ಬಿ.ಡಿ.ಸಿ.ಪಿ ಕಛೇರಿಯ ಎಲ್ಲಾ ಅಧಿಕಾರಿಗಳು, ಚಿತ್ರದುರ್ಗ, ತುಮಕೂರು, ದಾವಣಗೆರೆ, ಹಾವೇರಿ, ಬೆಳಗಾವಿ, ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಜಿಲ್ಲೆಗಳಿಂದ ಆಗಮಿಸಿರುವ ಎಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳು ಇದ್ದರು

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣ