ಸಿರುಗುಪ್ಪ: ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ RDPR ಇಲಾಖೆಯ AEE ತಿಪ್ಪೆಸ್ವಾಮಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಿಗ್ಗೆ ಲೋಕಾಯುಕ್ತ ಎಸ್ ಪಿ ವಾಸುದೇವರಾಮ್ ನೇತೃತ್ವದ ತಂಡ ಸಿರುಗುಪ್ಪದ ಕಚೇರಿ, ಬಳ್ಳಾರಿಯ ಹನುಮಾನ್ ನಗರದಲ್ಲಿರುವ ನಿವಾಸ ಹಾಗೂ ಕುಡಿತಿನಿ ಪಟ್ಟಣದ ಮತ್ತೊಂದು ನಿವಾಸದಲ್ಲಿ ಏಕಕಾಲಕ್ಕೆ ಧಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದೆ.
