ಬಳ್ಳಾರಿ,ಆ.12
ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಭರದಿಂದ ಸಾಗಿದ್ದು, ಮಂಗಳವಾರದ ಅಂತ್ಯಕ್ಕೆ ಒಟ್ಟು ಮತದಾರರ ನಮೂನೆಗಳ ಪೈಕಿ ಶೇ. 81.83 ರಷ್ಟು ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
*ಎಸ್‌ಐಆರ್ ಅವಧಿ:*
ಒಟ್ಟು ಮತದಾರರ ಸಂಖ್ಯೆ: 12,29,586.
ಮನೆ-ಮನೆ ಸಮೀಕ್ಷೆ ಹಾಗೂ ಡಿಜಿಟಲೀಕರಣ ಅವಧಿ: ಜೂನ್ 30 ರಿಂದ ಆಗಸ್ಟ್ 17.
ಕರಡು ಮತದಾರರ ಪಟ್ಟಿ ಪ್ರಕಟಣೆ: ಆಗಸ್ಟ್ 24.
ಮತದಾರರ ನೋಂದಣಿ ಎಸ್‌ಐಆರ್ ನಮೂನೆ ವಿತರಣೆ: ಒಟ್ಟು 12,29,586 ನಮೂನೆಗಳನ್ನು (ಶೇ. 100) ಬಿಎಲ್‌ಒಗಳ ಮೂಲಕ ಸಂಪೂರ್ಣವಾಗಿ ವಿತರಿಸಲಾಗಿದೆ.
ಆನ್‌ಲೈನ್ ಸಲ್ಲಿಕೆ: ಒಟ್ಟು 4,606 ಮತದಾರರು ಸ್ವತಃ ಆನ್‌ಲೈನ್ ಮೂಲಕ ನಮೂನೆಗಳನ್ನು ಸಲ್ಲಿಸಿದ್ದಾರೆ.
*ಮತದಾರರ ವರ್ಗೀಕರಣ:*
ಸಮೀಕ್ಷೆಯ ವೇಳೆ ಒಟ್ಟು 2,23,418 ಮತದಾರರ ಮಾಹಿತಿ ಕೆಳಗಿನಂತೆ ಗುರುತಿಸಲ್ಪಟ್ಟಿದೆ.
ಶಾಶ್ವತವಾಗಿ ಸ್ಥಳಾಂತರಗೊAಡವರು: 1,01,897
ಗೈರುಹಾಜರಿ / ಲಭ್ಯವಿಲ್ಲದವರು: 50,172
ಮೃತಪಟ್ಟವರು: 41,126
ಈಗಾಗಲೇ ನೋಂದಾಯಿತರಾದವರು (ಪುನರಾವರ್ತಿತ): 21,249
ಇತರ ಕಾರಣಗಳು: 8,974
ಜಿಲ್ಲೆಯ 1,227 ಮತಗಟ್ಟೆಗಳ ವ್ಯಾಪ್ತಿಯ 12,29,586 ಮತದಾರರಿಗೆ ವಿತರಿಸಲಾದ ಎಸ್‌ಐಆರ್ ಗಣತಿ ನಮೂನೆಗಳಲ್ಲಿ ಈವರೆಗೆ 10,06,168 ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಆಗಸ್ಟ್ 17ರೊಳಗೆ ಉಳಿದ ಡಿಜಿಟಲೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಆಗಸ್ಟ್ 24 ರಂದು ಅಧಿಕೃತವಾಗಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
