ರಾಯಚೂರು ಆಗಸ್ಟ್ 12 : ವಿದ್ಯಾರ್ಥಿನಿಯರು ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ ಯಾವುದೇ ಪ್ರಮಾಣದ ಉದ್ಯಮಗಳಾಗಲಿ ಅವುಗಳನ್ನು ಪ್ರಾರಂಭಿಸುವ ಮೊದಲು ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವದು ಬಹಳ ಅವಶ್ಯಕ ಎಂದು ಸಿಡಾಕ್ ಸಲಹೆಗಾರರಾದ ಜಿ.ಯು.ಹುಡೇದ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇತ್ತೀಚೆಗೆ ರಾಯಚೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ 3 ದಿನಗಳ ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ದೇಶೀಸಿ ಮಾತನಾಡುತ್ತಾ, ಉದ್ಯಮಗಳನ್ನು ಪ್ರಾರಂಭಿಸುವವರಿಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ, ಎಂದು ತಿಳಿಸಿ ಅರ್ಥಿಕ ಅಭಿವೃದ್ಧಿಗೆ ಉದ್ಯಮಗಳ ಪಾತ್ರ ಮಹತ್ವತ್ತಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಗುಣ ಬಸವರಾಜ, ಇವರು ಬಿ ಎ, ಬಿಕಮ್, ಬಿ ಎಸ್ ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದ ಕಾಂiÀið ಶಾಘ್ಲಿಸುತ್ತಾ, ಮುಂದೆ ಬರುವ ದಿನಗಳಲ್ಲಿ ಸರಿಯಾದ ಗುರಿಯನ್ನು ಇಟ್ಟುಕೊಂಡು ಸಮಾಜವನ್ನು & ದೇಶವನ್ನು ಬಲಪಡಿಸುವ ನಿಟ್ಟಿನಲ್ಲಿ ಧನಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು. ವಿದ್ಯಾರ್ಥಿನಿಯರಿಗೆ ಸಿಡಾಕ್ ಸಂಸ್ಥೆಯಿAದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಸಿಡಾಕ್ ಮುಖಾಂತರ ತರಬೇತಿ ಪಡೆದು ಉದ್ಯಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಶ್ರೀಮತಿ ನಾಗರತ್ನ, ಅವರು ತಮ್ಮ ಅನುಭವ ಹಂಚಿಕೊAಡರು, ಶಿಬಿರಾರ್ಥಿಗಳಾದ ಕುಮಾರಿ ಅಶ್ವಿನಿ, ಕುಮಾರಿ ಸಾನಿಯಾ ಇವರುಗಳು ತರಬೇತಿ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.
ಉದ್ಯಮವನ್ನು ಆಯ್ಕೆ ಮಾಡುವ ವಿಧಾನ, ವ್ಯಾಪಾರೋದ್ಯಮಗಳ ಅವಕಾಶಗಳು, ಉದ್ಯಮಗಳನ್ನು ಪ್ರಾರಂಭಿಸುವ ಹಂತಗಳು, ಸ್ವಯಂ ಉದ್ಯೋಗಕ್ಕೆ ಇರುವ ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರ, ಲೆಕ್ಕ ಪತ್ರ ನಿರ್ವಹಣೆ, ಯೋಜನಾ ವರದಿ ತಯಾರಿಕೆ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಲ್ಲಿ ಸಹಾಯ ನೀಡುವದು, ಇತ್ಯಾದಿ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ, ಇಲಾಖೆ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳಿಂದ ಉಪನ್ಯಾಸ / ಮಾಹಿತಿ ನೀಡಲಾಯಿತು ಎಂದು ಶ್ರೀ ನಾಗರಾಜ ಕೆ, ಸಿಡಾಕ್ ತರಬೇತಿದಾರರು, ತಿಳಿಸಿದರು.
ಸಮಾರಂಭದಲ್ಲಿ ಕುಮಾರಿ ಸಂಗಿತಾ ಪ್ರಾರ್ಥಿಸಿದರು. ನಾಗರಾಜ ಕೆ, ತರಬೇತಿದಾರರು, ಸಿಡಾಕ್, ರಾಯಚೂರು ಇವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಮತಿ ಇಂದಿರಾ, ಜಿಲ್ಲಾ ಕೈಗಾರಿಕಾ ಕೇಂದ್ರ, ರಾಯಚೂರು, ಉದ್ಯೋಗ ಕೋಶದ ಸಂಚಾಲಕರಾದ ಶ್ರೀ ರಂಗನಾಥ ಬಿಲ್ಲಾದ, ಡಾ ಜ್ಯೋತಿ ಐಕ್ಯೂಎಸಿ ಸಂಚಾಲಕರು, ಪ್ರಾಧ್ಯಾಪಕರುಗಳಾದ ಡಾ. ಉಮಾದೇವಿ, ಡಾ. ಆಸ್ಮಾ, ಶರಣೇಗೌಡ ಕೆ ಐಕ್ಯೂಎಸಿ ಸಹ ಸಂಚಾಲಕರು, ಸಂತೋಷ, ವಿಷ್ವನಾಥ ಎಪ್ ಎಲ್ ಸಿ, ಎಸ್ ಬಿ ಐ, ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಮನೋಹರÀ, ಬಜಾರಪ್ಪ ಇವರು ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ತರಬೇತಿ ಪಡೆದ 65 ಅಭ್ಯರ್ಥಿಗಳು ಹಾಜರಿದ್ದರು.
