Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾನವ ಕಳ್ಳ ಸಾಗಣಿಕೆ ತಡೆಗೆ ಜಾಗೃತಿ ಅಗತ್ಯ: ಡಾ. ಸಂಜಯ್ ದೊಡ್ಡಮನಿ. *

ಕಾರವಾರ, 01ಮಾನವ ಕಳ್ಳಸಾಗಣೆಯು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದ್ದು, ಮಕ್ಕಳು, ಮಹಿಳೆಯರು, ಬಡವರು, ಸಾಲದ ಸಂಕಷ್ಟದಲ್ಲಿರುವವರು ಹಾಗೂ ಶಿಕ್ಷಣದಿಂದ ವಂಚಿತರಾದವರು ಈ ಪಿಡುಗಿಗೆ ಹೆಚ್ಚು ಬಲಿಯಾಗುತ್ತಿದ್ದು, ಇದನ್ನು ತಡೆಗಟ್ಟಲು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ.ವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಜಯ್ ದೊಡ್ಡಮನಿ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲಿಸ್ ಇಲಾಖೆ, ಮಾನವ ಕಳ್ಳಸಾಗಣಿಕರ ವಿರೋಧಿ ಘಟಕ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನೆ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರವಾರ ವತಿಯಿಂದ ಆಯೋಜಿಸಲಾದ ಮಾನವÀ ಕಳ್ಳ ಸಾಗಣಿಕೆ ತಡೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಯೋಗ, ಹಣ, ಉತ್ತಮ ಜೀವನದ ಭರವಸೆ ನೀಡುವುದು ಮುಂತಾದ ಇತರೆ ಆಮಿಷಗಳನ್ನು ಒಡ್ಡಿ , ಮೋಸಗೊಳಿಸಿ ಮಾನವ ಕಳ್ಳಸಾಗಣೆ ಮಾಡಿ, ಅವರನ್ನು ಬಾಲ್ಯ ವಿವಾಹ, ಬಲವಂತದ ದುಡಿಮೆ, ಲೈಂಗಿಕ ಶೋಷಣೆ ಹಾಗೂ ಇತರೆ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಆದ್ದರಿಂದ ಇಂತಹ ಪ್ರಕರಣಗಳನ್ನು ಕೇವಲ ಅಪರಾಧದ ದೃಷ್ಟಿಯಿಂದ ಮಾತ್ರವಲ್ಲ,ಸಂತ್ರಸ್ತರ ಹಿನ್ನಲೆಯನ್ನು ಅರ್ಥಮಾಡಿಕೊಂಡು ಅವರಿಗೆ ರಕ್ಷಣೆ, ಆರೈಕೆ, ಪುನರ್ವಸತಿ ಮತ್ತು ಅಗತ್ಯ ಸಹಾಯವನ್ನು ಕಲ್ಪಿಸಬೇಕು ಎಂದರು.
ಅನುಮಾನಾಸ್ಪದ ಘಟನೆಗಳು, ಉದ್ಯೋಗದ ಹೆಸರಿನಲ್ಲಿ ಬರುವ ಮೋಸದ ಆಮೀಷ ಅಥವಾ ಮಕ್ಕಳ ಹಾಗೂ ಮಹಿಳೆಯರ ಸುರಕ್ಷತೆಗೆ ಸಂಬAಧಿಸಿದ ಯಾವುದೇ ವಿಷಯ ಕಂಡುಬAದರೆ ತಕ್ಷಣ ಸಂಬAಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇತರ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಂತ್ರಸ್ತರಿಗೆ ಅಗತ್ಯ ಸೇವೆಗಳನ್ನು ಒದಗಿಸಲಾಗುವುದು. ಗರ್ಭಿಣಿಯರು, ಮಕ್ಕಳು ಹಾಗೂ ಮಹಿಳೆಯರ ರಕ್ಷಣೆಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಪದ್ಮಾವತಿ ಜಿ ಮಾತನಾಡಿ, ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕಾವಲು ಸಮಿತಿಗಳನ್ನು ರಚಿಸಿ ಮಾನವ ಕಳ್ಳಸಾಗಣೆ ತಡೆಗೆ ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕಾವಲು ಸಮಿತಿ ಕಾರ್ಯ ನಿರ್ವಹಿಸುತ್ತಿದ್ದು, ಮಾನವ ಕಳ್ಳಸಾಗಣೆಗೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ದೃಷ್ಠಿಯಿಂದ ಅವರಿಗೆ ಪುನರ್ ವಸತಿ ಕೇಂದ್ರ, ಸಖಿ ಕೇಂದ್ರ, ಶಕ್ತಿ ಸದನ ಕೇಂದ್ರ, ಬಾಲಕ ಮತ್ತು ಬಾಲಕಿಯರ ವಸತಿ ನಿಲಯ, ರಾಜ್ಯ ಮಹಿಳಾ ಘಟಕ, ಸಾಂತ್ವಾನ ಕೇಂದ್ರ ಇತರೆ ಕೇಂದ್ರಗಳು ಸಂತ್ರಸ್ತರಿಗೆ ಕೌಶಲ್ಯ ತರಬೇತಿ, ಶಿಕ್ಷಣ, ಉದ್ಯೋಗದ ಅವಕಾಶಗಳು ಹಾಗೂ ಸಮಾಜದ ಮುಖ್ಯವಾಹಿನಿಗೆ ಮರಳಲು ಅಗತ್ಯ ನೆರವು ನೀಡಿ, ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಮಾನವ ಕಳ್ಳಸಾಗಣೆ ತಡೆಗಟ್ಟಲು ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲೆ ಪದ್ಮಾ ಕೆ. ತಾಂಡೇಲ್ ಮಾತನಾಡಿ, ಮಾನವ ಕಳ್ಳಸಾಗಣೆ ತಡೆಯಲು ಸಾಕಷ್ಟು ಕಾನೂನುಗಳು, ಶಿಕ್ಷೆಗಳು ಹಾಗೂ ಸರ್ಕಾರಿ ಮತ್ತು ಸ್ವಯಂಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತಿದ್ದರೂ ಇಂತಹ ಪ್ರಕರಣಗಳು ನಡೆಯುತ್ತಿರುವುದು ವಿಷಾದನೀಯ. ಇದನ್ನು ತಡೆಗಟ್ಟಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿದರೆ ಮಾತ್ರ ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯ ಎಂದರು.
ಸAಪನ್ಮೂಲ ವ್ಯಕ್ತಿಗಳಾದ ಪೇಮಲತಾ ಮತ್ತು ಡೆನ್ನಿಸ್ ಪ್ರಿನ್ಸ್ ಅವರು ಮಾನವ ಹಕ್ಕುಗಳ ಮತ್ತು ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಮಾನವ ಕಳ್ಳ ಸಾಗಣಿಕೆ ತಡೆಟ್ಟುವ ಪ್ರಮಾಣ ವಚನ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಗಿರೀಶ್, ಕಾರ್ಮಿಕ ಇಲಾಖೆಯ ಅಧಿಕಾರಿ ಲಲಿತಾ ಸಾತೇನಹಳ್ಳಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಹಾಗೂ ಮಕ್ಕಳ ರಕ್ಷಣಾಧಿಕಾರಿ(ಪ್ರ) ಕುಮಾರ ಎನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಘಟಕ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಸಖಿ ಕೇಂದ್ರ, ಶಕ್ತಿ ಸದನ, ಮಕ್ಕಳ ಕಲ್ಯಾಣ ಸಮಿತಿ, ಪೋಷಣ ಅಭಿಯಾನ ಸಮಿತಿ ಮಿಷನ್ ಶಕ್ತಿ ಯೋಜನೆಯ ಅಧಿಕಾರಿ ಸಿಬ್ಬಂದಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾನವ ಕಳ್ಳ ಸಾಗಣಿಕೆ ತಡೆಗೆ ಜಾಗೃತಿ ಅಗತ್ಯ: ಡಾ. ಸಂಜಯ್ ದೊಡ್ಡಮನಿ. *ಹಣದ ಬೇಡಿಕೆ ಭ್ರಷ್ಟತನ; ಪ್ರಾಥಮಿಕ ವರದಿಯಿಂದ ದೃಢ -- ಕನಕಗಿರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಮಾನತಿಗೆ ಶಿಫಾರಸ್ಸುಹವಾಮಾನ ಸ್ಥಿತಿಸ್ಥಾಪಕತ್ವಕ್ಕೆ ಸಮಗ್ರ ಕೃಷಿ ಆಸರೆ: ಜಿಲ್ಲಾ ಪಂಚಾಯತ್‌ ಸಿ.ಇ.ಒ. ಅಭಿಮತಸಮಾಜದ ಹಿತ ಬಯಸುವುದೇ ಸಾಹಿತ್ಯಸಮಾಜದ ಹಿತ ಬಯಸುವುದೇ ಸಾಹಿತ್ಯಬಳ್ಳಾರಿ ರಾಘವ ಮೆಮೋರಿಯಲ್ ಅಸೋಸಿಯೇಷನ್, 146ನೇ ಜಯಂತಿ ಅಂಗವಾಗಿ ರಾಜ್ಯ ಪ್ರಶಸ್ತಿ ಪ್ರದಾನ, ನಾಟಕೋತ್ಸವಆಗಸ್ಟ್ 15ರಿಂದ ಕೊಪ್ಪಳದಲ್ಲಿ 10ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನಕುಡತಿನಿ: ಕಟ್ಟಡ ತ್ಯಾಜ್ಯ ಎಲ್ಲೆಂದರಲ್ಲಿ ಚೆಲ್ಲಿದರೆ, ನಿಷೇಧಿತ ಪ್ಲಾಸ್ಟಿಕ್ ಬಳಸಿದರೆ ಭಾರೀ ದಂಡದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳುಬಳ್ಳಾರಿ: ಆಗಸ್ಟ್ 2 ರಂದು ಪೊಲೀಸ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿ