Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಣಪುರಂ ಫೈನಾನ್ಸ್ ಸೇವಾ ನ್ಯೂನ್ಯತೆ: ಪರಿಹಾರ ನೀಡಲು ಆಯೋಗ ಆದೇಶ





ಶಿವಮೊಗ್ಗ,ಜೂ.18: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೌರಾಪುರ ಅಜ್ಜಂಪುರದ ತಾಲಿಬ್ ಪಾಷ ಬಿನ್ ಅನ್ಸರ್ ಪಾಷ ಇವರು ಮಣಪುರಂ ಫೈನಾನ್ಸ್ ಲಿಮಿಟೆಡ್ ಶಿವಮೊಗ್ಗ, ಮುಜೀರ್‌ಪಾಷ, ಕೇರಾಫ್ ವಿನಸ್ ಆಟೋಮೊಬೈಲ್ಸ್ ಹಾಸನ ಮತ್ತು ರೀಜನಲ್ ಟ್ರಾನ್ಸ್ಪೋರ್ಟ್ ಅಥಾರಿಟಿ ಎಆರ್‌ಟಿಓ ತರೀಕೆರೆ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.

ದೂರುದಾರರು ಲಾರಿ ಸಂಖ್ಯೆ: ಕೆ.ಎ.52-ಬಿ-4032ರ ಮಾಲೀಕರಾಗಿದ್ದು, 1 ನೇ ಎದುರುದಾರ ಹಣಕಾಸು ಸಂಸ್ಥೆಯಿAದ ರೂ.8,30,000/- ಗಳ ಸಾಲವನ್ನು(ಲೋನ್ ಕಂ ಹೈಪೋಥಿಕೇಶನ್)ಪಡೆದಿದ್ದು, 52 ಇಎಂಐ ಕಂತುಗಳ ಮೂಲಕ ಸಾಲವನ್ನು ತೀರಿಸಲು ಒಪ್ಪಂದವಾಗಿರುತ್ತದೆ. ಮತ್ತು ದೂರುದಾರರು ಸಾಲವನ್ನು ಪಡೆಯುವಾಗ ಆರು ಬ್ಲಾö್ಯಂಕ್ ಚೆಕ್‌ಗಳನ್ನು ಸಹ ನೀಡಿರುತ್ತಾರೆ. ತದನಂತರ ಲಾರಿಯು ಅಪಘಾತವಾಗಿದ್ದು, ಈ ಲಾರಿಯನ್ನು ಪೊಲೀಸ್‌ನವರು ವಶಕ್ಕೆ ಪಡೆದಿರುತ್ತಾರೆ. ದಿನಾಂಕ:20/02/2024 ರಂದು ಪೊಲೀಸ್‌ನವರಿಂದ ಲಾರಿಯನ್ನು ಬಿಡಿಸಿಕೊಂಡು ರಿಪೇರಿಗಾಗಿ ಬಿಟ್ಟಿದ್ದಾಗ ಎದುರುದಾರರು ಲಾರಿಯನ್ನು ತನ್ನ ಏಜೆಂಟರ ಮೂಲಕ ವಶಕ್ಕೆ ಪಡೆದಿರುತ್ತಾರೆ. ಆಗ ದೂರುದಾರರು ಎಆರ್‌ಟಿಓ ತರಿಕೇರೆ ರವರಿಗೆ ಪತ್ರವನ್ನು ಬರೆದು ಲಾರಿಯನ್ನು ಬೇರೆ ಯಾರ ಹೆಸರಿಗೂ ವರ್ಗಾಯಿಸಬಾರೆಂದು ತಿಳಿಸಿರುತ್ತಾರೆ.

1 ನೇ ಎದುರುದಾರರು ಲಾರಿಯನ್ನು ಸೀಜ್ ಮಾಡುವ ಮುಂಚಿತವಾಗಿ ಎದುರುದಾರರಿಗೆ ನೋಟಿಸನ್ನಾಗಲಿ ಅಥವಾ ನ್ಯಾಯಾಲಯದ ಆದೇಶವನ್ನಾಗಲಿ ತರದೇ ಲಾರಿಯನ್ನು ಸೀಜ್ ಮಾಡಿರುವುದು ಲೋನ್ ಕಂ ಹೈಪೋಥಿಕೇಶನ್ ಅಗ್ರಿಮೆಂಟ್‌ಗೆ ವಿರುದ್ದವಾಗಿದ್ದು, ಎದುರುದಾರರ ನಡೆಯಿಂದ ತಮಗೆ ಬಹಳ ಆರ್ಥಿಕ ನಷ್ಟ ಉಂಟಾಗಿರುವುದಾಗಿ ಮತ್ತು ತಾವು ರೂ.1,87,000/-ಗಳ ಸಾಲ ಕಟ್ಟಿದ್ದರು ಸಹ ಅಗ್ರಿಮೆಂಟ್ ವಿರುದ್ದವಾಗಿ ಲಾರಿಯನ್ನು ಸೀಜ್ ಮಾಡಿ 2 ನೇ ಎದುರುದಾರರಿಗೆ ಬಾಡಿಗೆ ರೂಪದಲ್ಲಿ ಲಾರಿಯನ್ನು ನೀಡಿರುವುದರಿಂದ ತಮಗೆ ಪ್ರತಿ ದಿನ ರೂ. 1,500/- ನಷ್ಟವಾಗುತ್ತಿರುವುದಾಗಿ ಮತ್ತು ಎದುರುದಾರರ ಈ ನಡೆಯನ್ನು ಸೇವಾ ನ್ಯೂನ್ಯತೆ ಎಂದು ದೂರನ್ನು ಸಲ್ಲಿಸಿರುತ್ತಾರೆ.

ಆಯೋಗವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಉಭಯ ಪಕ್ಷದವರ ವಾದ-ವಿವಾದಗಳನ್ನು ಆಲಿಸಿ 1 ನೇ ಎದುರುದಾರರು ದೂರುದಾರರಿಗೆ ಕಾನೂನು ರೀತ್ಯಾ ನೋಟಿಸ್ ಅನ್ನು ನೀಡದೆ ಲಾರಿಯನ್ನು ವಶಪಡಿಸಿಕೊಂಡು ಮಾರಿರುವುದರಿಂದ ಎದುರುದಾರರು ಸೇವಾ ನ್ಯೂನ್ಯತೆಯನ್ನು ಎಸಗಿರುವುದಾಗಿ ಪರಿಗಣಿಸಿ ದೂರನ್ನು ಭಾಗಶಃ ಪುರಸ್ಕರಿಸಿ ಈ ಆದೇಶವಾದ ದಿನಾಂಕದಿ0ದ 45 ದಿನಗಳೊಳಗಾಗಿ ದೂರುದಾರರ ವಶಕ್ಕೆ ಲಾರಿಯನ್ನು ನೀಡತಕ್ಕದ್ದು, ತಪ್ಪಿದಲ್ಲಿ ಈ ಆದೇಶವಾದ ದಿನಾಂದಿAದ ಪ್ರತಿದಿನ ರೂ.1000/-ಗಳನ್ನು ದೂರುದಾರರ ವಶಕ್ಕೆ ಲಾರಿಯನ್ನು ನೀಡುವವರೆಗೂ ಪಾವತಿಸಬೇಕೆಂದು ಹಾಗೂ 1 ನೇ ಎದುರುದಾರರು ರೂ.20,000/- ಗಳನ್ನು ಮಾನಸಿಕ ವೇದನೆಗೆ ಹಾಗೂ ದೂರಿನ ಖರ್ಚು-ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗೆ ಪಾವತಿಸಬೇಕು. ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.12 ರಂತೆ ಬಡ್ಡಿಯನ್ನ ಸೇರಿಸಿ ಈ ಆದೇಶವಾದ ದಿನದಿಂದ ಪೂರಾ ಹಣ ಪಾವತಿಸುವವರೆಗೂ ಪಾವತಿಸಲು ಹಾಗೂ 2 ಮತ್ತು 3 ನೇ ಎದುರುದಾರರ ವಿರುದ್ಧ ದೂರನ್ನು ವಜಾ ಮಾಡಿರುವುದಾಗಿ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ದಿನಾಂಕ:5/6/20205 ರಂದು ಆದೇಶಿಸಿದೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ