Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿ ವಿದ್ಯಾರ್ಥಿ ಕೂಡ  ವೈಜ್ಞಾನಿಕ ಅಭ್ಯಾಸ ಕ್ರಮವನ್ನು ಅಳವಡಿಸಿಕೊಳ್ಳಬೇಕು : ಡಾ.ಮಧುಸೂಧನ್ ಕಾರಿಗನೂರು


ಮಾನ್ವಿ: ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಹಾಗೂ ತಾಲೂಕು ಘಟಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ , ಹಾಗೂ ಮಾಧ್ಯಮ ಸಮಿತಿ, ಸೈಜನಾ ಫೌಂಡೇಶನ್ - ಭಾರತೀಯ ವೈದ್ಯಕೀಯ ಸಂಘ ಸಿರುಗುಪ್ಪ, ಸಂಯುಕ್ತಾಶ್ರಯದಲ್ಲಿ ನಡೆದ ನೆನಪಿಗೆ ವ್ಯಾಯಾಮ ಮತ್ತು ಸೋತು ಗೆದ್ದ ಸಾಧಕರಿವರು ವಿದ್ಯಾರ್ಥಿಗಳಿಗೆ ಪ್ರೇರಣಾ ತರಗತಿಯ ಕಾರ್ಯಕ್ರಮದಲ್ಲಿ ಡಾ. ಮಧುಸೂಧನ್ ಕಾರಿಗನೂರು ಶಸ್ತçವೈದ್ಯರು ಸಿರುಗುಪ್ಪ ಉಪನ್ಯಾಸ ನೀಡಿ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಶೇ 80 ರಷ್ಟು ಅಂಕಗಳನ್ನು ಪಡೆಯುವ ಸಾಮರ್ಥ್ಯ ಇದ್ದರು ಕೂಡ ಅವರು ಸರಿಯಾದ ರೀತಿಯಲ್ಲಿ ಓದುವ ಅಭ್ಯಾಸವನ್ನು ರೂಡಿಸಿಕೊಳ್ಳದೆ ಇರುವುದರಿಂದ ಅತ್ಯಂತ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದಾರೆ ಪ್ರತಿ ವಿದ್ಯಾರ್ಥಿ ಕೂಡ  ವೈಜ್ಞಾನಿಕ ಅಭ್ಯಾಸ ಕ್ರಮವನ್ನು ಅಳವಡಿಸಿಕೊಳ್ಳಬೇಕು ಪ್ರತಿ ಅಭ್ಯಾಸದ ನಡುವೆ ವಿಶ್ರಾಂತಿಯನ್ನು ಪಡೆದು ಕೊಂಡು ಅಸಮಯದಲ್ಲಿ ಇತರ ಚಟುವಟಿಕೆಗಳನ್ನು ,ನಡೆಸುವುದರಿಂದ ನಾವು ಅಭ್ಯಾಸ ನಡೆಸಿದ ವಿಷಯಗಳು ನೆನಪಿನಲ್ಲಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ ಕೇವಲ ಓದುವುದರ ಜೋತೆಗೆ ಪುನರ ನಮನ ಹಾಗೂ ನಮ್ಮಲಿನ ಎಡ ಮೆದುಳನ್ನು ಬಳಸುವ ಕುರಿತು ವ್ಯಾಯಮ ಮಾಡಿದಲ್ಲಿ ಹೆಚ್ಚು ಸಮಯದವರೆಗೆ ವಿಷಯ ನೆನಪಿನಲ್ಲಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ. ಪರಿಕ್ಷೇ ಸಮಯದಲ್ಲಿ ಅತಂಕಕ್ಕೆ ಒಳಗಾಗದೆ ಶಾಂತ ರೀತಿಯಿಂದ ಉತ್ತರಗಳನ್ನು ಬರೆಯುವ ಮೂಲಕ ಹೆಚ್ಚು ಅಂಕಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿಗಳಾದ ತಾಯಪ್ಪ ಬಿ.ಹೊಸೂರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಕ್ಷೇತ್ರದ ಅಭಿವೃದ್ದಿಯ ಜೋತೆಗೆ  ನಾಡಿನ ನೆಲ,ಜಲ,ಭಾಷೆ, ರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗಾಗಿ ವಿವಿಧ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಾದ  ನರಸಿಂಹ ಮೂರ್ತಿ ಹಾಸ್ಯ ಪ್ರಸಂಗಗಳ ಮೂಲಕ ನಗೆಗಡಲಿನಲ್ಲಿ ತೇಲಿಸಿದರು. ಬಳ್ಳಾರಿಯ ವಿಜ್ಞಾನ ಶಿಕ್ಷಕರಾದ ಎಸ್.ಎಂ.ಹಿರೇಮಠ ವಿಜ್ಞಾನ ಗೀತೆಗಳನ್ನು ಹಾಡಿದರು. ಪಕ್ಷಿ ಪ್ರೇಮಿ ಸಲ್ಲಾವುದಿನ್ ಪಕ್ಷಿಗಳ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕೆ.ಪಿ.ಎಸ್.ವಿ.ಎಸ್.ಅಯುರ್ವೇದಿಕ್ ಮೆಡಿಕಲ್ ಕಾಲೇಜಿನ ಮತ್ತು ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಜೀವನೇಶ್ವರಯ್ಯ,  ನೇತಾಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ.ವಿಜಯಲಕ್ಷಿö್ಮÃ, ತಾಲೂಕು ಕ.ಸಾ.ಪ.ಅಧ್ಯಕ್ಷರಾದ ಶರಣಬಸವ ನೀರಮಾನ್ವಿ, ಕೆ.ರಾಜರವಿವರ್ಮ, ಕೆ.ಇ. ನರಸಿಂಹ,ಅ.ಖಿ.ಭಾ.ವೀ.ಲಿA.ಮಹಾಸಭಾ ಮಾನ್ವಿ ತಾ.ಅಧ್ಯಕ್ಷರಾದ ಅರುಣ್ ಚಂದಾ ಹಾಗೂ ಮಾಧ್ಯಮ ಸಮಿತಿಯ ಅಧ್ಯಕ್ಷರಾದ ರಾಜಶೇಖರಸ್ವಾಮಿ , ಸಿದ್ದಾರಾಮಯ್ಯಸ್ವಾಮಿ,ಕಿಡಿಗಣಯ್ಯಸ್ವಾಮಿ,ಚನ್ನಬಸವಸ್ವಾಮಿ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ