Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರಯ ಪತ್ರ ಬರೆದು ಕೊಡಲು ಹುಬ್ಬಳ್ಳಿಯ ಗೋಲ್ಡನ್ ಹೋಮ್ಸ್ ಬಿಲ್ಡರ್ಸ್‍ಗೆ ಆಯೋಗದ ಆದೇಶ





ಧಾರವಾಡ  ಏ.28:* ಜಮಖಂಡಿಯ ನಿವಾಸಿಯಾದ ಪ್ರಕಾಶ ಚೌರಡ್ಡಿ ಇವರು 2010 ನೇ ಇಸವಿಯಲ್ಲಿ ಹುಬ್ಬಳ್ಳಿಯ ಗೋಲ್ಡನ್ ಹೋಮ್ಸ್ ಬಿಲ್ಡರ್ಸ್ ಇವರಿಂದ ರೂ.18 ಲಕ್ಷ ರೂಪಾಯಿ ಪಾವತಿಸಿ ಪ್ಲ್ಯಾಟ ನಂ.901 ನ್ನು ಖರೀದಿಸಿದ್ದರು. ಈ ಬಗ್ಗೆ ಉಭಯತರ ಮಧ್ಯ ಖರೀದಿ ಒಪ್ಪಂದ ಪತ್ರ ಆಗಿತ್ತು. ಪ್ಲ್ಯಾಟ ಕಟ್ಟಿಸಿ ಸ್ವಾಧೀನತೆಕೊಟ್ಟಿದ್ದರೂ ಸದರಿ ಬಿಲ್ಡ್ರ್ಸ್ ದೂರುದಾರರಿಗೆ ನೋಂದಾಯಿತ ಕ್ರಯ ಪತ್ರ ಮಾಡಿ ಕೊಟ್ಟಿರಲಿಲ್ಲ. ಆ ಕಾರಣದಿಂದ ಗೋಲ್ಡನ್ ಹೋಮ್ಸ್ ಬಿಲ್ಡ್ರ್ಸ್ರವರು ಸೇವಾ ನ್ಯೂನ್ಯತೆ ಎಸಗಿ ತಮಗೆ ಮೋಸ ಮಾಡಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:18/09/2024 ರಂದು ದೂರನ್ನು ಸಲ್ಲಿಸಿದ್ದರು.



ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಪೂರ್ತಿ ಹಣಕೊಟ್ಟ ಮೇಲೆ ಗೋಲ್ಡನ್ ಹೋಮ್ಸ್ ಬಿಲ್ಡ್ರ್ಸ್ರವರು ಪ್ಲ್ಯಾಟ ನಿರ್ಮಿಸಿ ದೂರುದಾರರಿಗೆ ಸ್ವಾಧೀನತೆಕೊಟ್ಟಿದ್ದರು. ಆ ಬಗ್ಗೆ ನೋಂದಾಯಿತ ಕ್ರಯ ಪತ್ರ ಮಾಡಿಕೊಡದೇ ಇರುವುದು ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ತೀರ್ಪು ನೀಡಿದ 45 ದಿವಸಗಳ ಒಳಗಾಗಿ ದೂರುದಾರರ ಪರವಾಗಿ ನೋಂದಾಯಿತ ಕ್ರಯ ಪತ್ರ ಮಾಡಿಕೊಡುವಂತೆ ಆದೇಶಿಸಿದೆ. ಅದಕ್ಕೆ ತಪ್ಪಿದ್ದಲ್ಲಿ ಕೋರ್ಟ ಕಮೀಷನರ್ ಮೂಲಕ ದೂರುದಾರರು ತಮ್ಮ ಸ್ವಂತ ಖರ್ಚಿನಲ್ಲಿ ನೋಂದಾಯಿತ ಕ್ರಯ ಪತ್ರ ಪಡೆಯಲು ಅರ್ಹರಿದ್ದಾರೆಂದು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ