Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾನ್ವಿ : ಲೋಕ ಅದಾಲತ್  2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥ.


ಮಾನ್ವಿ.   ಪಟ್ಟಣದ ಸಿವಿಲ್ ಮತ್ತು ಜೆ. ಎಂ.ಎಫ್.ಸಿ.  ನ್ಯಾಯಾಲಯದಲ್ಲಿ ನಡೆದ  ರಾಷ್ಟ್ರೀಯ ಲೋಕ ಅದಾಲತ್  ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ  ಹೆಚ್ಚು  ರಾಜಿಯಾಗಬಲ್ಲ  ವಿವಿಧ ಮೊಕದ್ದಮೆಗಳನ್ನು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರಾದ  ಶಿವರಾಜ್. ವಿ. ಸಿದ್ದೇಶ್ವರ್ ಮತ್ತು ಸಿವಿಲ್ ನ್ಯಾಯಾಧೀಶರಾದ ಆನಂದ ಹೆಚ್. ಕೊಣ್ಣೂರು   ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದರು.

ಮಾನ್ವಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಅನೇಕ ಪ್ರಕರಣಗಳನ್ನು ಕಕ್ಷಿದಾರ ಸಮ್ಮುಖದಲ್ಲಿ ರಾಜಿ ಸಂದಾನ ಮಾಡಿದರು.

ಹಿರಿಯ ಶ್ರೇಣಿ ಸಿವಿಲ್ ಮತ್ತು ಜೆ.ಎ..ಎಪ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶಿವರಾಜ ವಿ.ಸಿದ್ದೇಶ್ವರ   593 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿದರು, ಸಿವಿಲ್ ಮತ್ತು ಜೆ.ಎಂ.ಎಪ್.ಸಿ.ನ್ಯಾಯಾಲಯದ ನ್ಯಾಯಾಧೀಶರಾದ ಆನಂದ ಹೆಚ್.ಕೊಣ್ಣೂರು 1525  ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ  ಇತ್ಯರ್ಥ ಪಡಿಸಿದರು,

ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿ  ಅನೇಕ ವರ್ಷಗಳಿಂದ ದೂರವಿದ್ದ  ದಂಪತಿಗಳನ್ನು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಆನಂದ ಹೆಚ್.ಕೊಣ್ಣೂರ  ಪರಸ್ಪರ ತಿಳಿಸಿ ಹೇಳುವ ಮೂಲಕ  ರಾಜಿ ಸಂಧಾನ ಮಾಡಿಸಿದ್ದು  ವಿಶೇಷವಾಗಿತ್ತು , ದಂಪತಿಗಳು  ಅನೇಕ ವರ್ಷಗಳಿಂದ ದೂರವಿದ್ದು ಜೀವನಾಂಶಕ್ಕಾಗಿ  ನ್ಯಾಯಾಲಯದಲ್ಲಿ ವಕೀಲರ ಮೂಲಕ  ಅರ್ಜಿ ಸಲ್ಲಿಸಿದರು ಅವರಿಗೆ  ಕೂಡಿ ಬಾಳುವಂತೆ  ತಿಳಿ ಹೇಳಿದ ನಂತರ  ಇಂದು ನಡೆದ ಲೋಕದಲತ್ ನಲ್ಲಿ  ಪರಸ್ಪರ ಒಪ್ಪಿ  ಪುನಃ  ದಾಂಪತ್ಯ ಜೀವನ ನಡೆಸುವುದಾಗಿ  ರಾಜಿಯಾಗಿದ್ದರಿಂದ  ನ್ಯಾಯಾಲಯದಲ್ಲಿ ಪರಸ್ಪರ ಹೂ ಮಾಲೆ ಬದಲಾಯಿಸಿಕೊಂಡು  ಸಿಹಿ ಹಂಚಿ  ದಂಪತಿಗಳು ಒಂದಾಗಿ ನಡೆದಿದ್ದು  ನ್ಯಾಯಾಲಯದಲ್ಲಿ  ಖುಷಿಯ ವಾತಾವರಣ ಮೂಡಿಸಿತು,

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ರವಿಕುಮಾರ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಚನ್ನಬಸವ ನಾಯಕ ಬಲ್ಲಟಗಿ,ಉಪಾಧ್ಯಕ್ಷರಾದ ಮನೋಹರ ವಿಶ್ವಕರ್ಮ,ಕೊರವಯ್ಯ ನಾಯಕ, ಖಜಾಂಚಿ ದತ್ತಾತ್ರೇಯ ಕೊಟ್ನೇಕಲ್, ಜಂಟಿ ಕಾರ್ಯದರ್ಶಿಗಳಾದ ಈಶಪ್ಪ ಬೈಲ್ ಮರ್ಚೇಡ್, ಮಲ್ಲೇಶ ಮಾಚನೂರು,  ಹಿರಿಯ ನ್ಯಾಯವಾದಿಗಳಾದ ಗುಮ್ಮ ಬಸವರಾಜ,ಬಿ.ಕೆ.ಅಮರೇಶಪ್ಪ, ಹನುಮಂತಪ್ಪ ಮುಷ್ಠೂರು, ರಾಜಾ ಶ್ಯಾಮ ಸುಂದರ ನಾಯಕ,  ಲಕ್ಷ್ಮೀ ದೇವಿ ನಾಯಕ,  ಸೆಟ್ಯಾಲ್ಲಾ ಸರ್ಲೆಟ್, ಶಿವಶರಣಪ್ಪ, ಮಲ್ಲಿಕಾರ್ಜುನ ಮೇಟಿ, ಯಲ್ಲಪ್ಪ ಹಿರೇಬಾದರದಿನ್ನಿ, ಹನುಮಯ್ಯ ರಂಗದಾಳ,ಹನುಮಂತರಾಯ ಕಪಗಲ್,  ಮೌನೇಶ ರಾಠೋಡ್, ನಾಗರಾಜ ಭಂಡಾರಿ,ಯಲ್ಲಪ್ಪ ನಾಯಕ ಮುಷ್ಕೂರು, ರಾಘವೇಂದ್ರ ಜಾನೇಕಲ್, ಶ್ರೀನಿವಾಸ ನಂದಿಹಾಳ, ಚಂದ್ರಶೇಖರ ಬೈಲ್ ಮರ್ಚೇಡ್, ,ವಿರೂಪಾಕ್ಷಿ ಮುಷ್ಕೂರು,ಬಸವರಾಜ ದೇವಿಪುರ, ಚಂದ್ರಶೇಖರ ನಾಯ್ಕ್ ,  ಗೂಗಲ್ ನಾಗರಾಜ,  ಸೇರಿದಂತೆ ಹಿರಿಯ ವಕೀಲರು ಮಹಿಳಾ ವಕೀಲರು ಸೇರಿದಂತೆ ಇತರರು ಇದ್ದರು

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ