Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನರೇಗಾ ಕ್ರಿಯಾ ಯೋಜನೆ: ಜಿ.ಪಂ ಸಿಇಓ ಅವರಿಂದ ಇರಕಲಗಡ ಗ್ರಾಮ ಪಂಚಾಯತ ವ್ಯಾಪ್ತಿಯ ಕಾಮಗಾರಿಗಳ ಪರಿಶೀಲನೆ....

ಕೊಪ್ಪಳ ಮಾರ್ಚ್ 11 : 2025-26ನೇ ಸಾಲಿನ ನರೇಗಾ ಕ್ರಿಯಾ ಯೋಜನೇಯಲ್ಲಿನ ಕಾಮಗಾರಿಗಳ ಅಳವಡಿಕೆಯ ಸ್ಥಳವನ್ನು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನo ಪಾಂಡೆಯ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಇರಕಲಗಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಾಮಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಕಾಂಪೌಂಡ್, ಯಲಮಗೇರಿ ಗ್ರಾಮದ ಚೆಕ್ ಡ್ಯಾಮ್ ಅಭಿವೃದ್ಧಿ, ಹನಮನಹಟ್ಟಿ ಗ್ರಾಮದ ಶಂಕ್ರಪ್ಪ ಇವರ ಮನೆ ಮುಂದೆಯ ಬಚ್ಚಲಗುಂಡಿ ಕಾಮಗಾರಿಗಳನ್ನು ಅನುಷ್ಠಾನಿಸಲು ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಂಡಿರುವ ಪೂರ್ವ ಸ್ಥಳ ಪರಿಶೀಲಿಸಿದ ಸಿಇಓ ಅವರು, ಕಾಮಗಾರಿ ಅನುಷ್ಠಾನಿಸಲು ಸ್ಥಳ ಆಯ್ಕೆ ಹೇಗೆ ಮಾಡಿಕೊಂಡಿದ್ದಾರೆ ಮತ್ತು ಕಾಮಗಾರಿ ಅನುಷ್ಠಾನಿಸುವದು ಅವಶ್ಯಕತೆ ಇದೆಯೆ ಎಂಬುದರ ಬಗ್ಗೆ ವೀಕ್ಷಿಸಿದರು.

ನರೇಗಾ ಕಾಮಗಾರಿಗಳ ಪರಿಶೀಲನೆ: ಗ್ರಾಮ ಪಂಚಾಯತಿಯಿಂದ ಅನುಷ್ಠಾನಗೊಂಡ ಹನಮನಹಟ್ಟಿ ಗ್ರಾಮದ ಶಾಲಾ ಕಂಪೌಂಡ ಕಾಮಗಾರಿ, ಯಲಮಗೇರಿ ಗುಡ್ಡದಲ್ಲಿರುವ ಜಿನ್ನಾಪುರ ಹನಮಂತ ದೇವಸ್ಥಾನದ ಹತ್ತಿರ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಪ್ರಗತಿಯಲ್ಲಿರುವ ಮಣ್ಣು-ನೀರು ಸಂರಕ್ಷಣಾ ಕಾಮಗಾರಿ(ಎಸ್.ಎಂ.ಸಿ), ಸಾಮಾಜಿಕ ಅರಣ್ಯ ಇಲಾಖೆಯ ಸಂಘ-ಸAಸ್ಥೆಗಳಲ್ಲಿ ಸಸಿ ನೆಟ್ಟ ಕಾಮಗಾರಿ ಪರಿಶೀಲಿಸಿದರು.

ಪ್ರಾಥಮಿಕ ಶಾಲೆಗೆ ಭೇಟಿ: ಚಾಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಿಇಓ ಅವರು ಭೇಟಿ ನೀಡಿ, ಅಲ್ಲಿರುವ ಮಕ್ಕಳ ಕಲಿಕಾ ಮಟ್ಟ ವೀಕ್ಷಿಸಿದರು. ಮಕ್ಕಳಿಗೆ ಮೊಟ್ಟೆ, ಆಹಾರ ವಿತರಣೆ ಕುರಿತು ಮಕ್ಕಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಎಡಿಪಿಸಿ ಮಹಾಂತಸ್ವಾಮಿ, ಪಂಚಾಯತ ಅಭಿವೃದ್ದಿ ಅಧಿಕಾರಿ ಪರಮೇಶ್ವರಯ್ಯ ತೆಳಗಡೆಮಠ, ಟಿಸಿ ಯಮನೂರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಸಾಮಾಜಿಕ ಅರಣ್ಯ ಉಪ ವಲಯ ಅರಣ್ಯಾಧಿಕಾರಿ ಅಬ್ದು ಸಮಿ, ಪ್ರಾದೇಶಿಕ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಲಿಂಗರಾಜ ಕನ್ನಾಳ, ಗಸ್ತು ಅರಣ್ಯ ಪಾಲಕ ಸಂತೋಷ ಹಾವನೂರು, ಎಸ್.ಡಿ.ಎ.ಎ ರೇಣುಕಾ, ಟಿಎಇ ಮಲ್ಲಿಕಾರ್ಜುನ ಮೆಗಳಮನಿ, ತಾಂತ್ರಿಕ ಸಹಾಯಕಿ ನೇತ್ರಾವತಿ, ಸರಸ್ವತಿ, ಬೇರ್ ಫೂಟ್ ಟೆಕ್ನಿಷಿಯನ್ ರವಿಶಂಕರ ಪೂಜಾರ, ಕರವಸೂಲಿಗಾರ ಕೊಟ್ರೇಶ್ ಉಪಸ್ಥಿತರಿದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ