Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಪರಿಚಿತ ವ್ಯಕ್ತಿಯ ಶವ ಪತ್ತೆ - ಗುರುತು ಪತ್ತೆಗೆ ಪೊಲೀಸರ ಮನವಿ


ಬಳ್ಳಾರಿ,ಏ.27

ಬಳ್ಳಾರಿ ತಾಲ್ಲೂಕಿನ ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ವಾರಸುದಾರರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.

ಘಟನೆಯ ವಿವರ:

ಏ.21 ರಂದು ಸಂಜೆ ಸುಮಾರು 4:30 ಗಂಟೆಯ ವೇಳೆಗೆ, ಶಿವಪುರ ಗ್ರಾಮದ ಹತ್ತಿರವಿರುವ ಎಸ್‌ಹೆಚ್ 132 ಬಳ್ಳಾರಿ-ಆಲೂರು ರಸ್ತೆಯ ಎಲ್‌ಎಲ್‌ಸಿ ಕಾಲುವೆಯ ಸೇತುವೆ ಪಕ್ಕದಲ್ಲಿ ಈ ಶವ ತೇಲುತ್ತಿರುವುದು ಕಂಡುಬoದಿದೆ. ಮೃತದೇಹವು ನೀರಿನಲ್ಲಿ ಬೋರಲಾಗಿ ಬಿದ್ದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ವ್ಯಕ್ತಿಯು ಆಕಸ್ಮಿಕವಾಗಿ ಕಾಲುವೆ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಮೃತನ ಚಹರೆ ಮಾಹಿತಿ:

ವಯಸ್ಸು ಅಂದಾಜು 30 ರಿಂದ 35 ವರ್ಷ, ಎತ್ತರ ಸುಮಾರು 5.5 ಅಡಿ, ಸದೃಢ ಮೈಕಟ್ಟು, ತಿಳಿ-ಬಿಳಿ ಬಣ್ಣದ ದಪ್ಪ ಗೆರೆಗಳುಳ್ಳ ಪೂರ್ಣ ತೋಳಿನ ಅಂಗಿ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.

ಮೃತನ ಮೂಗು, ತುಟಿ ಹಾಗೂ ಎರಡು ಕಾಲುಗಳ ಚರ್ಮವನ್ನು ಜಲಚರ ಪ್ರಾಣಿಗಳು ತಿಂದಿರುವ ಗುರುತುಗಳಿವೆ. ಇನ್ನುಳಿದಂತೆ ದೇಹದ ಮೇಲೆ ಯಾವುದೇ ಗುರುತುಗಳು ಮೇಲ್ನೋಟಕ್ಕೆ ಕಂಡುಬ0ದಿಲ್ಲ.

ಮೃತನ ಹೆಸರು ಅಥವಾ ವಿಳಾಸದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರು-08392-258100, ಸಿರುಗುಪ್ಪ ಪೊಲೀಸ್ ಉಪ ಅಧೀಕ್ಷಕರು-ಮೊ.9480803021, ಪಿ.ಡಿ ಹಳ್ಳಿ ವೃತ್ತದ ವೃತ್ತ ನಿರೀಕ್ಷಕರು-ಮೊ.9480803031, ಮೋಕಾ ಪೊಲೀಸ್ ಠಾಣೆ-0892293228, 9480803050 ಗೆ ಸಂಪರ್ಕಿಸಬಹುದಾಗಿದೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ