Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನಿಂದ ಕೇದಾರನಾಥಕ್ಕೆ ಹೋಗಲು ವಿಶೇಷ ರೈಲು

ಬೆಂಗಳೂರಿನಿಂದ ಉತ್ತರಖಂಡದ ಚಾರ್‌ಧಾಮ್‌ಗಳಲ್ಲಿ ಒಂದಾದ ಕೇದಾರನಾಥ ದೇವಸ್ಥಾನಕ್ಕೆ ಹೋಗಲು ಬಯಸುವವರಿಗೆ ಒಂದು ಶುಭ ಸುದ್ದಿ. ಅದೇನೆಂದರೆ ಸಂಪರ್ಕ ಕ್ರಾಂತಿ ರೈಲು ಮೂಲಕ ಬೆಂಗಳೂರಿನಿಂದ ಕೇದಾರನಾಥಕ್ಕೆ ಹೋಗಬಹುದಾಗಿದೆ. ಹಾಗಾದರೆ ಬೆಂಗಳೂರಿನಿಂದ ರೈಲಿನ ಮೂಲಕ ಕೇದಾರನಾಥ ಧಾಮಕ್ಕೆ ತೆರಳುವುದು ಹೇಗೆ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.ಮೇ 10ರಂದು ಕೇದಾರನಾಥ, ಯಮುನೋತ್ರಿ, ಗಂಗೋತ್ರಿ ಹಾಗೂ ಬದರಿನಾಥ ಧಾಮವನ್ನು ಮೇ 12ರಂದು ತೆರೆಯಲಾಗಿದೆ. ಕರ್ನಾಟಕದಿಂದ ಚಾರ್‌ಧಾಮ್ ಯಾತ್ರೆ ಕೈಗೊಳ್ಳುವವರಿಗೆ ವಿಶೇಷ ರೈಲುಗಳ ಸೌಲಭ್ಯವನ್ನು ಒದಗಿಸಲಾಗಿದೆ. ಹೌದು... ಉತ್ತರಖಂಡದ ಚಾರ್‌ಧಾಮ್‌ಗಳಲ್ಲಿ ಒಂದಾದ ಕೇದಾರನಾಥ ದೇವಸ್ಥಾನಕ್ಕೆ ಹೋಗಲು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನ ಯಶ್ವಂತಪುರದಿಂದ ಸಂಪರ್ಕ ಕ್ರಾಂತಿ ರೈಲು ಹೊರಡುತ್ತದೆ. ಈ ರೈಲಿನಲ್ಲಿ ದೆಹಲಿವರೆಗೆ ಪ್ರಯಾಣ ಮಾಡಬಹುದು. ಹಾಗಾದರೆ ಈ ರೈಲು ಯಾವ ದಿನ ಇರುತ್ತದೆ? ಹೊರಡುವ ಸಮಯ ಯಾವುದು? ಎಲ್ಲದರ ಬಗ್ಗೆ ತಿಳಿಯೋಣ. ಬೆಂಗಳೂರಿನಿಂದ ಕೇದಾರನಾಥಕ್ಕೆ ರೈಲಿನ ಮೂಲಕ ಹೋಗಲು ಬಯಸುವವರಿಗೆ ಟೂರ್ ಪ್ಲ್ಯಾನ್ ಇಲ್ಲಿದೆ. ಈ ಪ್ಲ್ಯಾನ್ ಮೂಲಕ ನೀವು ಸುಲಭವಾಗಿ ಕೇದಾರನಾಥಕ್ಕೆ ಭೇಟಿ ನೀಡಬಹುದು.

ದೆಹಲಿಯಿಂದ ಹರಿದ್ವಾರಕ್ಕೆ ಪ್ರಯಾಣ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೇ ಸ್ಟೇಷನ್ ನಿಂದ 9.50ಕ್ಕೆ ಇನ್ನೊಂದು ಟ್ರೈನ್ ಮೂಲಕ ಹರಿದ್ವಾರಕ್ಕೆ ಹೋಗಬೇಕಾಗುತ್ತದೆ. ಇದು ಹರಿದ್ವಾರವನ್ನು ಸಂಜೆ 4.10ಕ್ಕೆ ತಲುಪುತ್ತದೆ. ಇದಕ್ಕೆ 190 ರೂಪಾಯಿ ಟಿಕೆಟ್ ದರ ಇರಲಿದೆ. ಶುಕ್ರವಾರವೇ ಹರಿದ್ವಾರವನ್ನು ತಲುಪಲಾಗುತ್ತದೆ. ಶನಿವಾರ ಬೆಳಿಗ್ಗೆ ಹರಿದ್ವಾರದಿಂದ ಸೋನ್‌ಪ್ರಯಾಗ್‌ ಗೆ ಬಸ್ ಮೂಲಕ ಪ್ರಯಾಣ (1000 ಪ್ರಯಾಣ ದರ) ಮಾಡಿ ರಾತ್ರಿ ಸೋನ್‌ಪ್ರಯಾಗ್‌ ನಲ್ಲಿ ಉಳಿದುಕೊಂಡು ಭಾನುವಾರ ಬೆಳಗ್ಗೆ ಬೇಗ ಜೀಪ್ ಮೂಲಕ ಗೌರಿಕುಂಡಕ್ಕೆ ಪ್ರಯಾಣ ಆರಂಭವಾಗುತ್ತದೆ. ಭಾನುವಾರ ಬೆಳಗ್ಗೆ ಸೋನ್‌ಪ್ರಯಾಗ್ ಮೂಲಕ ಗೌರಿಕುಂಡಕ್ಕೆ ಜೀಪ್ ಮೂಲಕ ಹೋಗಲಾಗುತ್ತದೆ. ಗೌರಿಕುಂಡದಿಂದ ಕೇದಾರನಾಥ್ ಟ್ರಕ್ಕಿಂಗ್ ಶುರುವಾಗುತ್ತದೆ. ಐದನೇ ದಿನವೇ ನೀವು ಕೇದಾರನಾಥ ಧಾಮವನ್ನು ತಲುಪುವ ಮೂಲಕ ದೇವರ ದರ್ಶನ ಮಾಡಬಹುದು.

ಚಾರ್‌ಧಾಮ್ ಯಾತ್ರೆಗೆ ರಿಜಿಸ್ಟ್ರೇಷನ್ ಮಾಡುವುದು ಹೇಗೆ? ಉತ್ತರಖಂಡನ ಯಾವುದೇ ಯಾತ್ರೆಗೆ ಹೋಗಬೇಕಾದರು ನೀವು ಯಾತ್ರಾ ರಿಜಿಸ್ಟ್ರೇಷನ್ ಮಾಡಿಸಲೇಬೇಕು. ಆನ್‌ಲೈನ್‌ನಲ್ಲಿ ಯಾತ್ರಾ ರಿಜಿಸ್ಟ್ರೇಷನ್ ಮಾಡಿಸುವುದಾದರೆ https://registrationandtouristcare.uk.gov.in/signin.php ಮೂಲಕ ಮಾಡಬಹುದು. ಇನ್ನೊಂದು tourist care uttarakhand ಮೊಬೈಲ್ ಆಪ್ ಕೂಡ ಇದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಕೂಡ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. ಇನ್ನೊಂದು ಯಾತ್ರಾ ರಿಜಿಸ್ಟ್ರೇಷನ್ ನಂಬರ್ 8394833833 ಇದೆ. ಇದನ್ನು ಸೇವ್ ಮಾಡಿಕೊಂಡು ಈ ನಂಬರ್‌ಗೆ ಯಾತ್ರಾ ಅಂತ ಮೆಸೇಜ್ ಮಾಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ