Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ನಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ



ಕೊಪ್ಪಳ ಜೂನ್ 30 : ಪತ್ನಿಯ ಕೊಲೆ ಮಾಡಿ 20 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ 73 ವರ್ಷದ ಆರೋಪಿಗೆ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದೆ.

ಆರೋಗ್ಯ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿದ್ದ ಮಾನ್ವಿ ತಾಲ್ಲೂಕಿನ ಹಾಲ್ದಾಳ ಗ್ರಾಮದ ಹನುಮಂತಪ್ಪ ತಂದೆ ಹುಸೇನಪ್ಪ ಎಂಬ ವ್ಯಕ್ತಿಯು ಗಂಗಾವತಿಯ ಗುಂಡಮ್ಮ ಕ್ಯಾಂಪಿನಲ್ಲಿ ತನ್ನ ಮೂರನೇ ಹೆಂಡತಿಯಾದ ರೇಣುಕಮ್ಮಳೊಂದಿಗೆ ವಾಸವಾಗಿದ್ದನು. ತನ್ನ ಹೆಂಡತಿಯ ಶೀಲದ ಬಗ್ಗೆ ಸಂಶಯಪಟ್ಟು 2002ರ ಜೂನ್ 20 ರ ರಾತ್ರಿ ಆಕೆಯ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿದ್ದನು. ನಂತರ ಸಾಕ್ಷಿ ನಾಶಪಡಿಸುವ ಸಲುವಾಗಿ ಬೇರೆ ಕಡೆ ಶವ ಸಾಗಿಸುವ ಉದ್ದೇಶದಿಂದ ಆಕೆಯ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಅದನ್ನು ಗಂಗಾವತಿ ಬಸ್ ನಿಲ್ದಾಣದಿಂದ ಸಾರಿಗೆ ಬಸ್‌ನಲ್ಲಿ ಲಗೇಜ್ ರೂಪದಲ್ಲಿ ಶವವನ್ನು ಸಾಗಿಸಿದ್ದನು. ಕಂಪ್ಲಿ ಪಿಎಸ್‌ಐ ಸುಧಾಕರ ಅವರು ಕಂಪ್ಲಿ ಚೆಕ್‌ಪೋಸ್ಟ್ನಲ್ಲಿ ಬಸ್ ಚಕಿಂಗ್ ನಡೆಸಿದ್ದು, ಮೂಟೆಯಲ್ಲಿ ಶವವಿರುವುದು ಪತ್ತೆಯಾಗಿರುತ್ತದೆ. ಈ ಬಗ್ಗೆ ಬಸ್ ಚಾಲಕ ಗುರುದೇವ ಅವರು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಅಂದಿನ ತನಿಖಾಧಿಕಾರಿಗಳಾದ ಹೊಸಪೇಟೆಯ ಗ್ರಾಮೀಣ ಸಿಪಿಐ(ಪ್ರಭಾರ) ಜಿ.ವಿಶ್ವನಾಥ, ಸಿಪಿಐ ಜಿ.ಜಿ.ಮರಿಬಾಶೆಟ್ಟಿ ಹಾಗೂ ಪ್ರಕರಣವನ್ನು ಸರಹದ್ದಿನ ಆಧಾರದ ಮೇಲೆ ಗಂಗಾವತಿ ನಗರ ಠಾಣೆಗೆ ವರ್ಗಾವಣೆಗೊಂಡಿದ್ದರಿಂದ ಅಂದಿನ ತನಿಖಾಧಿಖಾರಿ ಗಂಗಾವತಿ ನಗರಠಾಣೆಯ ಪಿಐ ಬಿ.ಎಸ್.ಶಾಂತಕುಮಾರ ಅವರು ಜಂಟಿಯಾಗಿ ಪ್ರಕರಣದ ತನಿಖೆ ನಡೆಸಿ ಆರೋಪಿಯ ವಿರುದ್ಧ ಆರೋಪ ಸಾಬೀತಾದ್ದರಿಂದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದ ವಿಚಾರಣೆಯಲ್ಲಿ ಅಪರಾಧ ಸಾಬೀತಾದ್ದರಿಂದ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಅವರು, ಆರೋಪಿತನಿಗೆ ಭಾರತೀಯ ದಂಡ ಸಂಹಿತೆ ಕಲಂ 302 ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ರೂ.10,000 ಗಳ ದಂಡವನ್ನು ವಿಧಿಸಿ, ತೀರ್ಪಿನ ದಿನಾಂಕದಿಂದ ಮೂರು ತಿಂಗಳೊಳಗೆ ದಂಡ ಕಟ್ಟದೇ ಇದ್ದಲ್ಲಿ 1 ವರ್ಷ ಸಾದಾ ಕಾರಾಗೃಹ ವಾಸದ ಶಿಕ್ಷೆಯನ್ನು ಅನುಭವಿಸುವಂತೆ ಹಾಗೂ ಕಲಂ 201 ಅಪರಾಧಕ್ಕೆ 3 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ಹಾಗೂ ರೂ.5000 ಗಳ ದಂಡವನ್ನು ಮೂರು ತಿಂಗಳೊಳಗೆ ಪಾವತಿಸುವಂತೆ, ತಪ್ಪಿದಲ್ಲಿ 3 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆಯನ್ನು ಅನುಭವಿಸುವಂತೆ ಮತ್ತು ದಂಡದ ಮೊತ್ತ ರೂ.15,000 ಗಳನ್ನು ಸರ್ಕಾರಕ್ಕೆ ಭರಿಸುವಂತೆ ಆದೇಶಿಸಿ, ಜೂನ್ 27 ರಂದು ತೀರ್ಪು ಪ್ರಕಟಿಸಿದೆ ಎಂದು ಗಂಗಾವತಿಯ ಸರಕಾರಿ ಅಭಿಯೋಜಕರಾದ ನಾಗಲಕ್ಷ್ಮೀ ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ: ಸಚಿವ ಬಿ. ನಾಗೇಂದ್ರ ಅವರಿಂದ ಗಾಂಧೀಜಿ ಪ್ರತಿಮೆಗೆ ನಮನ, 150 ಅಡಿ ಎತ್ತರದ ಧ್ವಜಾರೋಹಣವಿಠ್ಲಾಪುರದಲ್ಲಿ  'ಜಾನಪದ ಚಿತ್ತ ಕಾಲೇಜಿನತ್ತ' ಕಾರ್ಯಕ್ರಮ ಯಶಸ್ವಿ: ಜಾನಪದ ವಿದ್ಯಾರ್ಥಿಗಳಿಗೆ ಭಾಷಾ ಜ್ಞಾನವನ್ನು ಸುಲಭವಾಗಿ ಪರಿಚಯಿಸುತ್ತದೆ ಸಿ.ಮಂಜುನಾಥಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----