Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಒಬ್ಬಟ್ಟು" ಚಲನಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

ಕೀರ್ತನಾ ಮೂವ್ಹಿ ಮೇ‍ ಬೆಂಗಳೂರ ಅವರ ಲೋಕೇಶ್ ವಿದ್ಯಾಧರ   ನಿರ್ದೇಶನದ ‘ಒಬ್ಬಟ್ಟು’  ಕನ್ನಡ ಚಲನಚಿತ್ರಕ್ಕೆ ್ರ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೇಟ್ ನೀಡಿದೆ. 

        ಹಾಸ್ಯಭರಿತ ಕಥಾಸಾರ ಹೊಂದಿದ ಈ  ‘ಒಬ್ಬಟ್ಟು’ ಚಿತ್ರೀಕರಣವನ್ನು    ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿ ಸಾಗ್ಯ ಸರಗೂರು ಗ್ರಾಮದಲ್ಲಿ ಮಾಡಾಲಾಗಿದೆ. ಯುಗಾದಿ ಹಬ್ಬದಲ್ಲಿ ನಡೆಯವ ಒಂದು ಪ್ರೇಮ ಕಥೆ.  ಇಬ್ಬರು ಪ್ರೇಮಿಗಳ ಮಧ್ಯೆ ಬೀಳುವ ಒಂದು ಹೆಣದ ಸುತ್ತ ನಡೆಯುವ ಹಾಸ್ಯ ಭರಿತ ಚಿತ್ರ ಇದಾಗಿದ್ದು ಕೊಲೆ ಹೇಗಾಯಿತು ? ಯಾಕಾಯಿತು ? ಎನ್ನುವ ಕುತೂಹಲದ ನಡುವೆ ಕೊಲೆ ರಹಸ್ಯ ಭೇದಿಸುವ ಒಂದು ಹಾಸ್ಯಪೂರಿತ ಮನರಂಜನೆಯನ್ನೊಳಗೊಡ ಕಥೆ. ಒಬ್ಬಟ್ಟಿನ ರುಚಿಯನ್ನು ಥೇಟರಗಳಲ್ಲೇ ಪ್ರೇಕ್ಷಕರು ಬಂದು ನಗೆಹೂರಣದ ಸವಿಯನ್ನು ಸವಿಯಬೇಕು. ಈಗಾಗಲೇ ಮಾಸ್ ಮ್ಯೂಸಿಕ್ ಅಡ್ಡಾ ಯೂಟ್ಯೂಬ್‌ದಲ್ಲಿ ‘ಬಾರೋ ಮಗಾ ಬಾರೋ ಮಗಾ’, ‘ನನ್ನಾಕೆ ಪ್ರೀತಿ ಸಿಹಿ ಒಬ್ಬಟ್ಟಂಗೆ’ ಲಿರಿಕಲ್ ವಿಡೀಯೋ ಹಾಡುಗಳು ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದ್ದು ಇದೀಗ ಸೆನ್ಸಾರ್ ಆಗಿದ್ದು ಶೀಘ್ರದಲ್ಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ  ಬಿಡುಗಡೆ ಮಾಡುವದಾಗಿ ನಿರ್ದೇಶಕ, ನಿರ್ಮಾಪಕ ಲೋಕೇಶ ವಿದ್ಯಾಧರ ಹೇಳುತ್ತಾರೆ. 

     ಚಿತ್ರದಲ್ಲಿ     ನಾಯಕ ಅಮೀತ್‌ರಾವ್,   ಕಿರುತೆರೆ, ಚಲನಚಿತ್ರ ಕಲಾವಿದೆ ಸುನಂದ ಕಲ್ಬುರ್ಗಿ, ಲೋಕೇಶ್ ವಿದ್ಯಾಧರ, ಮಂಡ್ಯ ನಾಗರಾಜ್, ಮುತ್ತುರಾಜ್.ಟಿ, ರಾಜು ಅರಸಿಕೆರೆ, ರೋಹಿಣಿ, ಧನಲಕ್ಷ್ಮೀ, ಮಂಜುಳಾ ಕೆಂಪೇಗೌಡ್ರು, ಸತೀಶ್ ಶೆಟ್ಟಿ,  ರವಿ ,ನಂಜಪ್ಪ ಡಿ.ಎಸ್ ಮುಂತಾದವರು ಅಭಿನಯಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ    ಛಾಯಾಗ್ರಹಣ ಬೆಟ್ಟೇಗೌಡ ಕೀಲಾರ ,     ಸ್ವರ ಸಂಯೋಜನೆ ಮತ್ತು ಹಾಡುಗಾರಿಕೆ ಎ.ಪಿ.ರವಿಕೀರ್ತಿ ,  ನೃತ್ಯ   ಅಲ್ಲಿನ್.ಎ ,  ಸಾಹಸ  ಸೂರ್ಯ ,   ಸಂಕಲನ   ಸಂಜೀವರೆಡ್ಡಿ ,   ಪ್ರಸಾಧನ ಯತೀಶ , ಸಹಕಾರ ಆನಂದ ಆರ್ಟ್ಸ,    ಪತ್ರಿಕಾ ಸಂಪರ್ಕ  ಡಾ.ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ ,  ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಲೋಕೇಶ್ ವಿದ್ಯಾಧÀರ  ,  ನಿರ್ಮಾಪಕರು ಸುನಂದಾ ಕಲ್ಬುರ್ಗಿ ಮತ್ತು ಲೋಕೇಶ್ ವಿದ್ಯಾಧÀರ     ಆಗಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣ