Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೊಪ್ಪಳ: ಹಿಂಗಾರು, ಬೇಸಿಗೆ ಹಂಗಾಮಿನ ಬೆಳೆವಿಮೆಗೆ ನೋಂದಾಯಿಸಲು ರೈತರಿಗೆ ಸೂಚನೆ --------


ಕೊಪ್ಪಳ ನವೆಂಬರ್ 20): ಕೃಷಿ ಇಲಾಖೆಯಿಂದ 2025-26ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಕೊಪ್ಪಳ ತಾಲ್ಲೂಕಿನ ಹೋಬಳಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳೆಗಳನ್ನು ಬೆಳೆವಿಮೆಗೆ ನೋಂದಾಯಿಸಲು ರೈತರಿಗೆ ತಿಳಿಸಿದೆ.

ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಮಳೆ ಆಶ್ರಿತ ಹುರಳಿ ಬೆಳೆಗೆ ವಿಮೆ ನೋಂದಾಯಿಸಲು ನವೆಂಬರ್ 15 ಕೊನೆಯ ದಿನವಾಗಿದೆ. ಮಳೆ ಆಶ್ರಿತ ಮತ್ತು ನೀರಾವರಿ ಬೆಳೆಗಳಾದ ಜೋಳ ಹಾಗೂ ಸೂರ್ಯಕಾಂತಿ, ಮಳೆ ಆಶ್ರಿತ ಕುಸುಮೆ ಬೆಳೆಗೆ ವಿಮೆ ನೋಂದಾಯಿಸಲು ಡಿಸೆಂಬರ್ 1 ಕೊನೆಯ ದಿನವಾಗಿದೆ. ಮಳೆ ಆಶ್ರಿತ ಮತ್ತು ನೀರಾವರಿ ಗೋಧಿ ಬೆಳೆಗೆ ವಿಮೆ ನೋಂದಾಯಿಸಲು ಡಿಸೆಂಬರ್ 15 ಕೊನೆಯ ದಿನವಾಗಿದೆ. ಮಳೆ ಆಶ್ರಿತ ಮತ್ತು ನೀರಾವರಿ ಕಡಲೆ ಬೆಳೆಗೆ ವಿಮೆ ನೋಂದಾಯಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಬೇಸಿಗೆ ಹಂಗಾಮಿನ ನೀರಾವರಿ ಬೆಳೆಗಳಾದ ಶೇಂಗಾ, ಭತ್ತ ಹಾಗೂ ಸೂರ್ಯಕಾಂತಿಗೆ ವಿಮೆ ನೋಂದಾಯಿಸಲು 2026 ರ ಫೆಬ್ರವರಿ 27 ಕೊನೆಯ ದಿನವಾಗಿದೆ.

ಬೆಳೆವಿಮೆ ಪರಿಹಾರ ಲಾಭ ಪಡೆಯಲು ರೈತರು ಕಡ್ಡಾಯವಾಗಿ ಎಫ್‌ಐಡಿ ಯನ್ನು ಹೊಂದಿರಬೇಕು. ರೈತರು ಬಿತ್ತನೆ ಮಾಡುವ ಬೆಳೆಯನ್ನೇ ನೋಂದಾಯಿಸಬೇಕು. ತಮ್ಮ ಬೆಳೆಯನ್ನು ತಾವೇ ಖುದ್ದಾಗಿ ಬೆಳೆ ಸಮೀಕ್ಷೆಯನ್ನು ಮಾಡಬೇಕು. ತಮ್ಮ ದಾಖಲಾತಿಗಳಾದ ಪಹಣಿ, ಆಧಾರ್ ಕಾರ್ಡ್ ಮತ್ತು ಪಾಸ್‌ಬುಕ್ ಜೆರಾಕ್ಸ್ ಪ್ರತಿಗಳನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ನೀಡದೆ, ಖುದ್ದಾಗಿ ಬೆಳೆವಿಮೆ ನೋಂದಾಯಿಸಲು ಸೂಚಿಸಿದೆ.

ಪ್ರಸಕ್ತ ಸಾಲಿಗೆ TATA AIG INSURANCE CO LTD, ಕಂಪನಿಯು ಆಯ್ಕೆಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಸೂಚಿತ ಎಲ್ಲಾ ಬೆಳೆಗಳ ಆಯ್ಕೆಗಾಗಿ ಹತ್ತಿರದ ಬ್ಯಾಂಕುಗಳಿಗೆ ಅಥವಾ ಇನ್ಸುರೆನ್ಸ್ ಕಂಪನಿಯ ಪ್ರತಿನಿಧಿ ಅಥವಾ ಟೋಲ್ ಫ್ರೀ ಸಂಖ್ಯೆ: 18002093536 ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ ಒನ್, ಸಂಬಂಧಪಟ್ಟ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣ