Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಾಹಕರ ಪ್ಲ್ಯಾಟ್‍ನ ಮುಂಗಡ ಹಣ ಮರಳಿಸಲು ಶ್ರೀ ಬಾಲಾಜಿ ಡೆವಲಪರ್ಸಗೆ ಜಿಲ್ಲಾ ಗ್ರಾಹಕರ ಆಯೋಗದ ಆದೇಶ





ಧಾರವಾಡ  ಜೂನ್ 19: ಬೆಳಗಾವಿಯ ರಾಮದುರ್ಗದ ನಿವಾಸಿ ಭಾರತಿ ಕೋಟಿ ಎಂಬುವವರು ಎದುರುದಾರರು ಅಭಿವೃದ್ದಿಪಡಿಸುತ್ತಿದ್ದ ಚಿಕ್ಕಮಲ್ಲಿಗವಾಡ ಗ್ರಾಮದ ಲೇಔಟನಲ್ಲಿ ಪ್ಲಾಟ್ ನಂ.150 ನ್ನು ಖರೀದಿಸಲು ಇಚ್ಚಿಸಿದ್ದರು. ಇದರ ಬಗ್ಗೆ ಉಭಯತರ ಮಧ್ಯ ರೂ.3,96,000 ಗಳ ಖರೀದಿ ಕರಾರು ಒಪ್ಪಂದವಾಗಿತ್ತು. ಇದರ ಪೈಕಿ ದೂರುದಾರರು ರೂ.2,52,000 ಗಳನ್ನು ಮುಂಗಡ ಹಣ ಪಾವತಿಸಿದ್ದರು. ಹಣ ಪಾವತಿಸಿದ ದಿನದಿಂದ ಇವತ್ತಿನವರೆಗೂ ಎದುರುದಾರರು ದೂರುದಾರರಿಗೆ ಬಾಕಿ ಹಣ ಪಡೆದು ಖರೀದಿ ಕರಾರು ಮಾಡಿಕೊಟ್ಟಿರಲಿಲ್ಲ ಮತ್ತು ಮುಂಗಡ ಹಣವನ್ನೂ ಸಹ ಮರಳಿ ಕೊಟ್ಟಿರಲಿಲ್ಲ. ಎದುರುದಾರರು ಅಂತಹ ನಡಾವಳಿಕೆಯಿಂದ ತನಗೆ ಮೋಸವಾಗಿದೆ ಮತ್ತು ಅವರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದಿ: 06/12/2024 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.



ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ, ದೂರುದಾರಳಿಂದ ರೂ.2,52,000 ಗಳನ್ನು ಮುಂಗಡ ಹಣ ಪಡೆದುಕೊಂಡು ಪ್ಲಾಟನ್ನು ಅಭಿವೃದ್ದಿಪಡಿಸದೇ ಎದುರುದಾರರು ಗ್ರಾಹಕ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನತೆ ಎಸಗಿರುತ್ತಾರೆ ಅಂತಾ ಅಭಿಪ್ರಾಯಪಟ್ಟು, ದೂರುದಾರಳು ಪಾವತಿಸಿದ ಹಣದಜೊತೆಗೆ ಶೇ.10 ರಂತೆ ಬಡ್ಡಿ ಸೇರಿಸಿ ಆದೇಶವಾದ ಒಂದು ತಿಂಗಳೊಳಗಾಗಿ ಪಾವತಿಸುವಂತೆ ಎದುರುದಾರರಿಗೆ ನಿರ್ಧೇಶಿಸಿದೆ. ಅಲ್ಲದೇ ದೂರುದಾರಳಿಗೆ ಆಗಿರುವ ಅನಾನುಕೂಲ ಹಾಗೂ ಮಾನಸೀಕ ಹಿಂಸೆಗೆ ರೂ.50,000 ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ರೂ.10,000 ಕೊಡುವಂತೆ ಎದುರುದಾರರಾದ ಸಾಯಿ ಬಿಲ್ಡರ್ಸಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣ