ಸಿರುಗುಪ್ಪ : ನಗರದ ತಹಶೀಲ್ದಾರ ನ್ಯಾಯಾಲಯದಲ್ಲಿವಕೀಲರಿಗೆ ಮೀಡಿಯೆಟರ್ ಎಂದು ತಹಶೀಲ್ದಾರರು ಪದ ಬಳಿಕೆ ಮಾಡಿದ್ದಾರೆಂದು ವಕೀಲರು ಆರೋಪಿಸಿ,ತಹಶೀಲ್ದಾರರ ವಾಹನ ತಡೆದು ಪ್ರತಿಭಟನೆಗೆ ಮುಂದಾದ ಘಟನೆ ನಿನ್ನೆ ನಡೆಯಿತು.ಮುಂದಿನ ವಾದವಿವಾದಕ್ಕೆ ಪ್ರಕರಣದ ಕಾಲಾವಕಾಶ ಹಾಗೂ ಆರು ತಿಂಗಳಿಂದ ಕಡತವನ್ನು ಜಿಲ್ಲಾಧಿಕಾರಿಗಳಿಗೆ ವಿಲೇವಾರಿ ಮಾಡದೆ ಇಲ್ಲಿಯೇ ಇದೆ ಎಂದು ವಕೀಲರು ಮನವರಿಕೆ ಮಾಡಿಕೊಂಡಾಗ
ತಹಶೀಲ್ದಾರರು ಏಕಾಏಕಿಯಾಗಿ ನೀವೇನು ಮೀಡಿಯೆಟರ್ ಎಂದು ಉಚ್ಚರಿಸಿದ್ದಾರೆ ಎಂದು ಸ್ಥಳದಲ್ಲಿಯೇ ಇದ್ದ ವಕೀಲರು ಹೇಳಿದರು.
ತಹಶೀಲ್ದಾರ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳ ಮೇಲೆ ಆರೋಪ ಪ್ರತ್ಯಾರೊಪಗಳ ಮದ್ಯ ಕೆಲಕಾಲ ಗೊಂದಲದ ವಾತವರಣ ಸೃಷ್ಟಿಯಾಗಿತ್ತು. ತಹಶೀಲ್ದಾರರ ಹಾಗೂ ವಕೀಲರ ಮಧ್ಯ ನಡೆದ ಪದಬಳಿಕೆ ಕುರಿತಾದ ವಾಗ್ವದದಘಟನೆ ಕುರಿತು, ತಹಶೀಲ್ದಾರರು ವಿಷಾದ ವ್ಯಕ್ತಪಡಿಸುವ ಮೂಲಕಸಿಪಿಐ ಹನುಮಂತಪ್ಪ ಅವರ ಮಧ್ಯಸ್ಥಿಕೆಯಲ್ಲಿ ಸಮಸ್ಯೆಇತ್ಯಾರ್ಥಗೊಂಡಿತು.
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.