Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.

ಆಧ್ಯಾತ್ಮದ ಅರಿವು-ಸಾಧನೆಯಿಂದ ಬದುಕಿನಲ್ಲಿ ಉನ್ನತಿ ಸಾಧ್ಯ - ಶ್ರೀ ರಂಭಾಪುರಿ ಜಗದ್ಗುರುಗಳು

ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)- ಡಿಶಂಬರ್-4.

ಮಣ್ಣಿನಿಂದಾದ ಮಡಿಕೆ ಒಂದು ದಿನ ನಾಶವಾಗುತ್ತದೆ. ಆದರೆ ಮಣ್ಣು ನಾಶವಾಗುವುದಿಲ್ಲ. ಪ್ರಪಂಚದ ತುಂಬೆಲ್ಲ ತುಂಬಿದ್ದಾನೆ ಪರಮಾತ್ಮ. ಆದರೆ ಕಣ್ಣಿಗೆ ಕಾಣುವುದಿಲ್ಲ. ಆಧ್ಯಾತ್ಮದ ಅರಿವು ಮತ್ತು ಸಾಧನೆಯಿಂದ ಬದುಕಿನಲ್ಲಿ ಉನ್ನತಿ ಸಾಧಿಸಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.   ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಎಲ್ಲಿ ಹುಟ್ಟಬೇಕು ಅನ್ನುವುದು ನಮ್ಮ ಕೈಯಲ್ಲಿಲ್ಲ. ಆದರೆ ಎಲ್ಲಿ ಮುಟ್ಟಬೇಕು ಅನ್ನುವುದು ನಮ್ಮ ಕೈಯಲ್ಲಿದೆ. ಗುರಿ ಮುಟ್ಟುವ ತನಕ ಮನುಷ್ಯನ ಹೆಜ್ಜೆಯಿರಬೇಕು. ಸೂರ್ಯ ಆರಂಭದಲ್ಲಿ ಕೆಂಪಾಗಿ ಉದಯಿಸಿ, ಕೆಂಪಾಗಿಯೇ ಅಸ್ತನಾಗುತ್ತಾನೆ. ಅದೇ ರೀತಿ ಮಹಾತ್ಮರು ಸಂಪತ್ತಿರಲಿ ವಿಪತ್ತಿರಲಿ, ಸುಖವಿರಲಿ ದುಃಖವಿರಲಿ ಯಾವಾಗಲೂ ಒಂದೇ ರೀತಿ ಬಾಳುತ್ತಾರೆ. ಸಹನೆಯಿಲ್ಲದ ಹೆಂಡತಿ, ಸಂಪಾದನೆಯಿಲ್ಲದ ಗಂಡ, ಮಾತು ಕೇಳದ ಮಕ್ಕಳು ಸುಖ ಸಂಸಾರದ ಶತ್ರುಗಳು. ಜ್ಞಾನದಿಂದ ಅಧಿಕಾರ ದೊರೆಯಬಹುದು. ಆದರೆ ಗೌರವ ಸಿಗಬೇಕಾದರೆ ವ್ಯಕ್ತಿತ್ವ ಸಂಪಾದಿಸಿಕೊಳ್ಳಬೇಕಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬದುಕಿನ ಉನ್ನತಿ ಮತ್ತು ಶ್ರೇಯಸ್ಸಿಗಾಗಿ ಬೋಧಿಸಿದ ಶಿವಾದ್ವೆöÊತ ಜ್ಞಾನ ಸಂಪತ್ತು ಸಕಲರನ್ನು ಉದ್ಧರಿಸುತ್ತದೆ ಎಂದರು.

ಕಲ್ಲುಬಾಳುಮಠದ ಶಿವಾನಂದ ಶಿವಾಚಾರ್ಯರು, ಹುಡುಗಿ ಹಿರೇಮಠ ಸೋಮೇಶ್ವರ ಶಿವಾಚಾರ್ಯರು, ಬಿಡದಿಮಠದ ಶ್ರೀಗಳು, ಕಲ್ಲಹಳ್ಳಿ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಪ್ರಭುದೇವ ಕಲ್ಮಠ, ಎಂ. ಕೊಟ್ರೇಶಪ್ಪ, ಬಾಸಾಪುರದ ಬಿ. ಎಂ. ಬೋಜೇಗೌಡರು, ಕಡವಂತಿ ಅಣ್ಣೇಗೌಡರು, ಶಿರವಾಸೆ ವಿಶ್ವನಾಥ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ನಾಡಿನೆಲ್ಲೆಡೆಯಿಂದ ಆಗಮಿಸಿದ ಭಕ್ತರು ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು. ಹುಣ್ಣಿಮೆ ನಿಮಿತ್ಯ ಶ್ರೀಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಪ್ರಸಾದ ವಿನಿಯೋಗ ಜರುಗಿತು.

ಸಿ.ಎಚ್. ಬಾಳನಗೌಡ್ರ

ವಾರ್ತಾ ಸಂಯೋಜನಾಧಿಕಾರಿ,

ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ, ಬಾಳೆಹೊನ್ನೂರು

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಗಡಿಗಳ ಬೀಗ ಮುರಿದು ಕಳವು: ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಬಂಧನ : ಸಾಹಿಲ್ ಬಾಗ್ಲಾ ======ರಸಗೊಬ್ಬರ ಅಕ್ರಮ ದಾಸ್ತಾನು: ಕೃಷಿ ಅಧಿಕಾರಿಗಳ ಮಿಂಚಿನ ದಾಳಿ ₹1.80 ಲಕ್ಷ ಮೌಲ್ಯದ 680 ಚೀಲ ವಶ; ಸಿರಿಗೇರಿ ಠಾಣೆಯಲ್ಲಿ ಪ್ರಕರಣಇಲಾಖೆ ನಿಯಮಾನುಸಾರ ಶಾಂತಿ ಸು ವ್ಯವಸ್ಥೆಯೊಂದಿಗೆ  ಶ್ರೀ ಗೌರಿ ಗಣೇಶ ಹಬ್ಬ ಆಚರಿಸಿ : ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ .ಡಿ ಪನ್ನೇಕರ್ ಕರೆಬದಲಿ ಕೃಷಿ ಕ್ರಾಂತಿ: ‘ದೃಢ ಕರ್ನಾಟಕ ಸಂಕಲ್ಪ’ ದಡಿ ಸಾಗುತ್ತಿದೆ ಪ್ರಗತಿಯ ರಥ ಭೂಮಿ, ನೀರು ಮತ್ತು ತಂತ್ರಜ್ಞಾನದ ಸಂಗಮ: ಸರ್ಕಾರದ ನೂರು ದಿನಗಳ ಪಯಣದಲ್ಲಿ ಅನ್ನದಾತನ ಬದುಕಿಗೆ ಹೊಸ ಭರವಸೆ ನೇಗಿಲ ಯೋಗಿಯಿಂದ ಡಿಜಿಟಲ್ ಮಿಷನ್‌ವರೆಗೆ: ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿರುವ ದೃಢ ಸರ್ಕಾರದ ನೂತನ ಉಪಕ್ರಮಗಳುಮನೆ ಬಾಗಿಲಿಗೆ ನಮ್ಮ ಸರ್ಕಾರ: ಗುಡೇಕೋಟೆ ಹೋಬಳಿಯಲ್ಲಿ ಇಂದು ಪ್ರಜಾ ಆಂದೋಲನ ವಿಶೇಷ ಕಾರ್ಯಕ್ರಮಸಮ್ಮೇಳನ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಡಾ  ಮಧುಸೂದನ ಕಾರಿಗನೂರ ಬಹಿರಂಗ ಸಮಾವೇಶ: ಬಳ್ಳಾರಿ ನಗರದಲ್ಲಿ ಮದ್ಯ ಮಾರಾಟ, ಸಾಗಣೆ ಸಂಪೂರ್ಣ ನಿಷೇಧಬಹಿರಂಗ ಸಮಾವೇಶ: ಬಳ್ಳಾರಿ ನಗರದಲ್ಲಿ ಮದ್ಯ ಮಾರಾಟ, ಸಾಗಣೆ ಸಂಪೂರ್ಣ ನಿಷೇಧಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಾರ್ವಜನಿಕ ಸಮಾವೇಶ: ಜಿಲ್ಲಾಡಳಿತದಿಂದ ಷರತ್ತುಬದ್ಧ ಅನುಮತಿವಾರಣಾಸಿಯ ಗಂಗಾ ಆರತಿಯ ಮಾದರಿಯಲ್ಲಿ ಶ್ರೀಕ್ಷೇತ್ರ ಹುಲಿಗಿಯಲ್ಲಿ ತುಂಗಭದ್ರಾ ಆರತಿ ಮಹೋತ್ಸವ ಸಂಭ್ರಮ ----