Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ ವಿತರಿಸುವ ಮೂಲಕ ಕುಮಾರಿ ರೇಣುಕಾ ಜನ್ಮ ದಿನ ಆಚರಣೆ

 

ಸಿರುಗುಪ್ಪ: ನಗರದ ಡ್ರೈವರ್ ಕಾಲೋನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜೀವ್ ಗಾಂಧಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಸಿದ್ಧಲಿಂಗ ಜೆ. ಮಸೂತಿ ಮತ್ತು ವ್ಯವಸ್ಥಾಪಕ ನರ‍್ದೇಶಕರಾದ ಪ್ರಿಯಾಂಕ ಎಸ್. ಮಸೂತಿ ದಂಪತಿಗಳ ಪುತ್ರಿಯಾದ ಕುಮಾರಿ ರೇಣುಕಾ ಅವರ ದ್ವಿತೀಯ ರ‍್ಷದ ಜನ್ಮದಿನವನ್ನು ಗುರುವಾರದಂದು ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ, ಅಂಕಲಿಪಿ ಮತ್ತು ಪೆನ್ನುಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು.


ಈ ಸಂರ‍್ಭದಲ್ಲಿ ಉಪಸ್ಥಿತರಿದ್ದ 6ನೇ ವಿಭಾಗದ ಸಿ.ಆರ್.ಪಿ.ಯವರಾದ ಮಾರುತಿ ಅವರು ಮಾತನಾಡುತ್ತಾ ”ರ‍್ಕಾರಿ ಶಾಲೆಗಳ ಬೆಳವಣಿಗೆಗೆ ಸರ‍್ವಜನಿಕರ ಪಾತ್ರ ಬಹಳ ಮುಖ್ಯವಾಗಿದ್ದು, ಈ ದಿನ ನಮ್ಮ ರ‍್ಕಾರಿ ಶಾಲೆಯಲ್ಲಿ ರಾಜೀವ್ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಸಿದ್ಧಲಿಂಗ ಜೆ. ಮಸೂತಿ ಮತ್ತು ಪ್ರಿಯಾಂಕ ಎಸ್. ಮಸೂತಿ ದಂಪತಿಗಳು ತಮ್ಮ ಮಗಳ ದ್ವಿತೀಯ ರ‍್ಷದ ಜನ್ಮದಿನ ಆಚರಣೆ ಅಂಗವಾಗಿ ಶಾಲೆಯ 80ಕ್ಕೂ ಮೇಲ್ಪಟ್ಟ ಮಕ್ಕಳೆಲ್ಲರಿಗೂ ನೋಟ್ ಪುಸ್ತಕ, ಪೆನ್ನು, ಅಂಕಲಿಪಿಯನ್ನು ವಿತರಿಸಿದ್ದು ಅಭಿನಂದನರ‍್ಹವಾಗಿದೆ. ಇದೇ ರೀತಿಯಾಗಿ ಸರ‍್ವಜನಿಕರು ಅನಗತ್ಯ ದುಂದು ವೆಚ್ಚಗಳನ್ನು ತಪ್ಪಿಸಿ ರ‍್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸಹಾಯ ಮಾಡಿದರೆ ಬಡಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಮಾನಕ್ಕೆ ಬರಲು ಸಾಧ್ಯವಾಗುತ್ತದೆ” ಎಂದರು.
ಈ ಸಂರ‍್ಭದಲ್ಲಿ ಮಾತನಾಡಿದ ರಾಜೀವ್ ಗಾಂಧಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಸಿದ್ಧಲಿಂಗ ಜೆ. ಮಸೂತಿಯವರು “ನಾವು ಖಾಸಗಿ ಶಾಲೆಯ ಮುಖ್ಯ ಗುರುಗಳಾಗಿದ್ದರೂ ಸಹ, ನಾವು ಓದಿದ್ದು ಕನ್ನಡ ಶಾಲೆಗಳಲ್ಲಿ ಹಾಗಾಗಿ ಕನ್ನಡ ಮತ್ತು ರ‍್ಕಾರಿ ಶಾಲೆಯ ಮೇಲಿನ ಅಭಿಮಾನ ಮರೆತಿಲ್ಲ ತಮ್ಮ ಮಗಳ ಜನ್ಮ ದಿನಾಚರಣೆಯನ್ನು ರ‍್ಕಾರಿ ಶಾಲೆಯಲ್ಲಿ ಈ ರೀತಿಯಾಗಿ ಆಚರಿಸಿದ್ದು ಖುಷಿ ನೀಡಿದೆ. ಇದೇ ರೀತಿ ಮುಂದೆ ಅಗತ್ಯವಿದ್ದಾಗ ತಮ್ಮ ಕೈಲಾದಷ್ಟು ಸಹಾಯವನ್ನು ನಾವು ಮಾಡಲು ಸಿದ್ಧರಿದ್ದೇವೆ” ಎಂದು ಹೇಳಿದರು
ಸದರಿ ಕರ‍್ಯಕ್ರಮದಲ್ಲಿ ರ‍್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ
ಬಿ.ಎಂ.ಶಿವಗಂಗಮ್ಮ, ಭಾರತಿ, ಅತಿಥಿ ಶಿಕ್ಷಕರಾದ ಅನಿತಾ, ಜಯಮ್ಮ, ಗಣ್ಯರಾದ ಪಂಪನಗೌಡ ಮುದ್ದಣ್ಣನವರ್, ಕೆ.ಎಂ.ಮಲ್ಲಿಕರ‍್ಜುನಯ್ಯ ಸ್ವಾಮಿ, ಪಂಪನಗೌಡ ಮತ್ತು ಶಾಲೆಯ ಮಕ್ಕಳೆಲ್ಲರೂ ಉಪಸ್ಥಿತರಿದ್ದರು. ಇದೇ ಸಂರ‍್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಬಿ. ಎಂ.ಶಿವಗಂಗಮ್ಮ ಅವರು ಸಿದ್ದಲಿಂಗ ಜೆ ಮಸೂತಿ ಮತ್ತು ಪ್ರಿಯಾಂಕ ಎಸ್. ಮಸೂತಿ ದಂಪತಿಗಳಿಗೆ ಅಭಿನಂದನೆ ಸಲ್ಲಿಸಿದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ