Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಷ್ಟ್ರೀಯ ಪ್ರಶಸ್ತಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ, ಜೂನ್ 28, : ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2024ನೇ ಸಾಲಿಗೆ ಅಂಗವಿಕಲ ವ್ಯಕ್ತಿಗಳ ಸಬಲೀಕರಣಕ್ಕಾಗಿ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿಗಳಿಗಾಗಿ ಅರ್ಹರಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.

ವೈಯಕ್ತಿಕ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿಗಳಾದ ಸರ್ವಶ್ರೇಷ್ಟ ದಿವ್ಯಾಂಗಜನ, ಶ್ರೇಷ್ಟ ದಿವ್ಯಾಂಗಜನ, ಶ್ರೇಷ್ಟ ದಿವ್ಯಾಂಗ ಬಾಲಕ/ಬಾಲಕಿ, ದಿವ್ಯಾಂಗ ಕ್ಷೇತ್ರಗಳಲ್ಲಿ ಪುನರ್ವಸತಿಗೆ ಶ್ರಮಿಸುತ್ತಿರುವ ವ್ಯಕ್ತಿ, ದಿವ್ಯಾಂಗ ಕ್ಷೇತ್ರಗಳಲ್ಲಿ ಸರ್ವ ಶ್ರೇಷ್ಟ ಸಂಶೋಧನೆ/ಪರಿವರ್ತನೆ/ಉತ್ಪನ್ನ ಅಭಿವೃದ್ಧಿ.

ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳಾದ ದಿವ್ಯಾಂಗಜನರ ಸಬಲೀಕರಣಕ್ಕಾಗಿ ಶ್ರಮಿಸಿದ ಸರ್ವಶ್ರೇಷ್ಟ ಸಂಸ್ಥೆ (ಖಾಸಗಿ ಸಂಸ್ಥೆ, ಎನ್.ಜಿ.ಓ), ದಿವ್ಯಾಂಗ ಜನರಿಗಾಗಿ ಇರುವ ಸರ್ವಶ್ರೇಷ್ಟ ಸಂಸ್ಥೆ, ದಿವ್ಯಾಂಗ ಜನರಿಗಾಗಿ ಇರುವ ಸರ್ವಶ್ರೇಷ್ಟ ಪ್ಲೇಸ್ಮೆಂಟ್ ಏಜೆನ್ಸಿ, ಸುಗಮ್ಯ ಭಾರತ ಅಭಿಯಾನದ ಕಾರ್ಯನ್ವಯನ/ಬಾಧಾಮುಕ್ತ ವಾತಾವರಣ ಸೃಷ್ಟಿಸುವಲ್ಲಿ ಸರ್ವಶ್ರೇಷ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶ/ಜಿಲ್ಲೆ, ಸರ್ವಶ್ರೇಷ್ಟ ಸುಗಮ್ಯ ಯತಾಯತ್ ಕಾರ್ಯಸಾಧನ/ಸೂಚನಾ ಮತ್ತು ಸಂಚಾರ ಪ್ರೊದ್ಯೊಗಿಕಿ, ದಿವ್ಯಾಂಗಜನರ ಹಕ್ಕುಗಳ ಅಧಿನಿಯಮ/ಯು.ಡಿ.ಐ.ಡಿ. ಮತ್ತು ದಿವ್ಯಾಂಗರ ಸಬಲೀಕರಣ ಇತರೆ ಯೋಜನೆಗಳ ನಿರ್ವಹಣೆಯಲ್ಲಿನ ಸರ್ವಶ್ರೇಷ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶ/ಜಿಲ್ಲೆ, ತಮ್ಮ ತಮ್ಮ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಿವ್ಯಾಂಗಜನರ ಹಕ್ಕುಗಳ ಅಧಿನಿಯಮವನ್ನು ಸ್ಥಾಪಿಸಿ ಸೇವೆ ಸಲ್ಲಿಸುತ್ತಿರುವ ಸರ್ವಶ್ರೇಷ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶದ ರಾಜ್ಯ ದಿವ್ಯಾಂಗಜನರ ಆಯುಕ್ತರು, ಪುನರ್ವಸತಿ ಸೇವೆಗಳಿಗಾಗಿ ಕಾರ್ಯೋನ್ಮುಖ ಸಿದ್ಧತೆಗಳನ್ನು ಮಾಡಿಕೊಂಡಿರುವ ಸರ್ವಶ್ರೇಷ್ಟ ಸಂಸ್ಥೆ.

ಈ ಎಲ್ಲಾ ಪ್ರಶಸ್ತಿಗಳಿಗಾಗಿ ಗೃಹ ವ್ಯವಹಾರಗಳ ಸಚಿವಾಲಯದಿಂದ ವಿನ್ಯಾಸಗೊಳಿಸಿರುವ ಪಾಸ್ವರ್ಡ್ ಪ್ರೊಟೆಕ್ಟೆಡ್ ಸೆಂಟ್ರಲೈಸ್ಡ್ ಪೋರ್ಟಲ್ www.awards.gov.in ರಲ್ಲಿ ಜುಲೈ-31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಇಲಾಖಾ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.:08182-295234 /251676 ಗಳನ್ನು ಸಂಪರ್ಕಿಸುವುದು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ