Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಿವಿಪಿ ತಾಲೂಕು ನೂತನ ಪದಾಧಿಕಾರಿಗಳ ನೇಮಕಾತಿ.

ಸಿಂಧನೂರು: ನಗರದ ಪ್ರವಾಸಿ ಮಂದಿರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ ನೇತೃತ್ವದಲ್ಲಿ ನೂತನ ತಾಲೂಕು ಪದಾಧಿಕಾರಿಗಳನ್ನು ನೇಮಕಾತಿ ಮಾಡಲಾಯಿತು.ನೂತನ ತಾಲೂಕ ಸಂಚಾಲಕರಾಗಿ ದುರುಗೇಶ್ ಕಲಮಂಗಿ, ಪ್ರಧಾನ ಕಾರ್ಯದರ್ಶಿ ನರಸಪ್ಪ ಅಮರಾಪುರ, ಕಾರ್ಯದರ್ಶಿ ಶರಣಬಸವ ಕಲ್ಮಂಗಿ, ಮಹಮ್ಮದ್ ಸುಲೇಮಾನ್,ಹನುಮಂತ  ಆಯ್ಕೆಯಾದರು.


ರಾಜ್ಯಾದ್ಯಂತ ವಿದ್ಯಾರ್ಥಿ  ಯುವಜನರನ್ನು ಶೈಕ್ಷಣಿಕವಾಗಿ ಮಾತ್ರವಲ್ಲದೇ ಸಾಮಾಜಿಕವಾಗಿ ವೈಚಾರಿಕವಾಗಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದರ ಜೊತೆಗೆ ಅವರನ್ನು ಯುವ ನಾಯಕರನ್ನಾಗಿ ಪರಿವರ್ತಿಸುವ ಭಾಗವಾಗಿ ಇಂದು ರಾಜ್ಯಾದ್ಯಂತ ಹೆಸರು ವಾಸಿಯಾದ ಸಂಘಟನೆಯಾಗಿದೆ.ಮತ್ತು ವಿಶೇಷವಾಗಿ ವಿದ್ಯಾರ್ಥಿ ಯುವ ಜನರ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸ್ವತಹ ನಾವೇ ಸಂಘಟನಾತ್ಮಕ ಚಟುವಟಿಕೆಗಳ ಮುಖಾಂತರ ನಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಚತುರರಾಗಬೇಕು. ಬಹು ಮುಖ್ಯವಾಗಿ ಶಿಕ್ಷಣಕ್ಕೆ ನಾವು ಪ್ರಮುಖ ಆದ್ಯತೆಯನ್ನು ಕೊಟ್ಟು ನಮ್ಮ ಜೀವನವನ್ನು ಸಾಕಾರಗೊಳ್ಳಲು ಕಾರ್ಯಪ್ರವೃತ್ತರಾಗಬೇಕು ಈ ಸಂದರ್ಭದಲ್ಲಿ ನಮಗೆ ಎದುರಾಗುವ ಶೈಕ್ಷಣಿಕ ತೊಡಕುಗಳು ಸಾಮಾಜಿಕ ಪಿಡುಗುಗಳ ವಿರುದ್ದ ಹೋರಾಡುವ ಪ್ರಜ್ಞಾವಂತರಾಗಬೇಕು. ಹಾಗಾದಾಗ ಮಾತ್ರ ನಮ್ಮ ವಿಮೋಚನೆ ಸಾಧ್ಯ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದವರು ಕೂಡಲೇ ವಿದ್ಯಾರ್ಥಿ ಯುವ ಜನರ ಕಲ್ಯಾಣಕ್ಕಾಗಿ ಶ್ರಮ ವಹಿಸಲು ಕಾರ್ಯಯೋನ್ಮುಖರಾಗಬೇಕು ಎಂದು ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ  ಕರೆಕೊಟ್ಟರು.


ಈ  ಸಂದರ್ಭದಲ್ಲಿ ಮುಖಂಡರಾದ ಮೌನೇಶ ತುಗ್ಗಲದಿನ್ನಿ, ಬಂಡೆಗುರು ಕರೆಗುಡ್ಡ, ಚೆನ್ನಬಸವ ಯಾಪಲಪರ್ವಿ, ರಸೀದ ಬನ್ನಿಗನೂರು, ಪ್ರಶಾಂತ,ಮಂಜುನಾಥ, ಹನುಮಂತ ವಿರುಪಾಪುರ, ಅಫ್ಜಲ್ ಕಲಮಂಗಿ, ಎರಿಸ್ವಾಮಿ ಭಾಗವಹಿಸಿದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ