ಸಿರುಗುಪ್ಪ: ನಗರದಲ್ಲಿ ಇನ್ನು ಮುಂದೆ ಎಲ್ಲಂದರಲ್ಲಿ ದ್ವಿಚಕ್ರ ವಾಹನ, ಇತರೆ ವಾಹನ ನಿಲ್ಲಿಸುವವರಿಗೆ ಶಾಕ್ ಕಾದಿದೆ. ನಗರದ ರಸ್ತೆಗಳಲ್ಲಿ ದ್ವಿ ಚಕ್ರ ವಾಹನ ಮತ್ತು ಕಾರುಗಳನ್ನು ರಸ್ತೆಯಲ್ಲಿ ನಿಲ್ಲಿಸುವದನ್ನು ತಪ್ಪಿಸಲು ಎಷ್ಟೇ ದಂಡ ಹಾಕಿದರೂ ಕಡಿಮೆಯಾಗದ ಕಾರಣ ಈಗ ಪೊಲೀಸ್ ಇಲಾಖೆ ಲಾಕರ್ ಗಳನ್ನು ಬಳಸಲು ಮುಂದಾಗಿದೆ. ಸಿರುಗುಪ್ಪ ವಲಯ dysp ವೆಂಕಟೇಶ ಹೊಗಿಬಂಡಿ ಅವರು ಲಾಕ್ ಲಾಕರ್ ತರಸಿ ಖುದ್ದು ತಾವೇ ರಸ್ತೆ ಮೇಲೆ ನಿಲ್ಲಿಸಿದ ವಾಹನಗಳ ಚಕ್ರಕ್ಕೆ ಲಾಕ್ ಹಾಕಿ
ದಂಡಕಟ್ಟಿಸಿ ಮತ್ತು ಅವರಿಗೆ ವಾಹನ ನಿಲ್ಲಿಸದಂತೆ ಜಾಗೃತಿ ಮೂಡಿಸಿದರು .ನಾಳೆಯಿಂದ ನಗರದ ಬಹುತೇಕ ಸ್ಥಳಗಳಲ್ಲಿ ಕಾರ್ಯಚರಣೆ ಮಾಡಲಾಗುತ್ತದೆ ಆದ್ದರಿಂದ ವಾಹನಗಳನ್ನು ಸರಿಯಾದ ಸ್ಥಳಗಳಲ್ಲಿ ನಿಲ್ಲಿಸ ಬೇಕೆಂದು ವಾಹನ ಸವಾರರಿಗೆ ತಿಳಿಸಿದರು.
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.