Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.

ಗಾನಯೋಗಿ’ ಪಂ. ಪಂಚಾಕ್ಷರಿ ಗವಾಯಿಗಳವರ 133 ನೆಯ ಜಯಂತೋತ್ಸವ ‘ಅಮರಸ್ವರ ಸಮಾರೋಹ’ ಫೆಬ್ರುವರಿ 02ರಂದು ಧಾರವಾಡದ ಬೇಂದ್ರೆ ಭವನದಲ್ಲಿ

 

ಧಾರವಾಡ-28. ಉತ್ತರದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ದಕ್ಷಿಣಕ್ಕೆ ತಂದ, ಅರಮನೆಯ ಸಂಗೀತಕ್ಕೆ ಗುರು ಮನೆಯ ಗೌರವವನ್ನು ದೊರಕಿಸಿಕೊಟ್ಟ, ವಚನ ಸಾಹಿತ್ಯವನ್ನು ಮೊಟ್ಟಮೊದಲಿಗೆ ಸಂಗೀತಕ್ಕೆ ಅಳವಡಿಸಿ ಹಾಡಿದ, ಗದಗು ಸಂಗೀತದ ಗದ್ದಿಗೆಯನ್ನಾಗಿ ಮಾಡಿದ, ಪಂಡಿತ ಪಂಚಾಕ್ಷರಿ ಗವಾಯಿಗಳವರ ಜಯಂತೋತ್ಸವವು, ಗದುಗಿನ ಕಲಾ ವಿಕಾಸ ಪರಿಷತ್ತು, ಧಾರವಾಡದ ಡಾ. ದ. ರಾ. ಬೇಂದ್ರೆ ಭವನದಲ್ಲಿ ಫೆಬ್ರವರಿ ೦೨ ರಂದು ಹಮ್ಮಿಕೊಂಡಿದೆ. ಬೆಳಿಗ್ಗೆ ೧೦-೩೦ ರಿಂದ ರಾತ್ರಿ ೮ ಗಂಟೆಯವರೆಗೆ ನಡೆಯುವ ಒಂದು ದಿನದ ಈ ಸಮಾರೋಹದ ಉದ್ಘಾಟನೆಯನ್ನು, ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಗಾಯಕರಾದ ಡಾ. ಶಾಂತಾರಾಮ ಹೆಗಡೆ ಇವರು ಉದ್ಘಾಟನೆ ಮಾಡಲಿದ್ದಾರೆ. ಧಾರವಾಡದ ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಧಾರವಾಡದ ಶ್ರೀ ಸಾಯಿ ಪ. ಪೂ. ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕರು ಆಗಿರುವ ಡಾ. ವೀಣಾ ಬಿರಾದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀ ಸಿ. ಕೆ. ಹೆಚ್. ಶಾಸ್ತ್ರೀ (ಕಡಣಿ) ಸಂಸ್ಥಾಪಕರು ಕಲಾ ವಿಕಾಸ್ ಪರಿಷತ್, ಗದಗ ಇವರು ಪ್ರಾಸ್ತಾವಿಕವಾಗಿ ಮಾತನಾಡುವರು.
ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಮಹಿಳಾ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ, ಸಂಗೀತ ಶಿಕ್ಷಕಿ ಶ್ರೀಮತಿ ದೇವಿಕಾ ಕೆ. ಜೋಗಿ, ಹೊಸಪೇಟೆ ಇವರು ಸ್ವಾಗತ ಮಾಡುವರು. ಸ್ವರ ಸಂವಾದಿನಿ ಸಂಗೀತ ಪಾಠಶಾಲೆಯ ಮಕ್ಕಳು ಪ್ರಾರ್ಥನಾ ಸಂಗೀತ ನಡೆಸಿಕೊಡುವರು. ಕುಮಾರಿ ಐಶ್ವರ್ಯ ಅಮೂಲ್ಯ ಹಡಪದ ಸಹೋದರಿಯರು ಸ್ವಾಗತ ನೃತ್ಯ ಸೇವೆ ಸಲ್ಲಿಸುವರು. ಅಳ್ನಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜನ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಪಿ. ಆರ್. ನಾಗರಾಳ ನಿರೂಪಣೆ ಮಾಡುವರು.
ಇದೇ ಸಂದರ್ಭದಲ್ಲಿ, ಕಲಾ ವಿಕಾಸ ಪರಿಷತ್‌ನ ೨೦೨೩-೨೪ ನೆಯ ಸಾಲಿನ ವಾರ್ಷಿಕ ಪ್ರಶಸ್ತಿ ‘ಗಾನಯೋಗಿ ಪಂಚಾಕ್ಷರಿ ಅನುಗ್ರಹ’ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಖ್ಯಾತ ತಬಲಾ ವಾದಕರು ಧಾರವಾಡ ಆಕಾಶವಾಣಿ ನಿಲಯದ ಕಲಾವಿದರು ಆಗಿರುವ ಕಲಬುರ್ಗಿಯ ಪಂ. ಶಾಂತಲಿಂಗಪ್ಪ ಹೂಗಾರ (ದೇಸಾಯಿ ಕಲ್ಲೂರ) ಇವರಿಗೆ, ಹಾಗೂ ಧಾರವಾಡದ ಪ್ರತಿಷ್ಠಿತ ಕಲಾ ಪೋಷಕ ಸಂಸ್ಥೆಯಾದ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಮತ್ತು ಶಿರಸಿಯ, ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿಯಾದ ಯಕ್ಷ ಕಲಾಸಂಗಮ ಕಲಾ ಪೋಷಕ ಮತ್ತು ಕಲಾ ಶಿಕ್ಷಣ ಸಂಸ್ಥೆಗಳಿಗೆ ಪ್ರದಾನಿಸಲಾಗುವುದು. ಉದ್ಘಾಟನೆ ಸಮಾರಂಭದ ನಂತರ ಮಹಾ ಪ್ರಸಾದ ವ್ಯವಸ್ಥೆಮಾಡಲಾಗಿದೆ. ಧಾರವಾಡದ ನಿವೃತ್ತ ಶಿಕ್ಷಕಿ ಶ್ರೀಮತಿ ಮಹಾದೇವಿ ಕೊಪ್ಪದ ಇವರು ಪ್ರಸಾದ ದಾಸೋಹ ಭಕಿಸೇವೆ ವಹಿಸಿಕೊಂಡಿದ್ದಾರೆ.
ಸಂಜೆ ೪ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಲಾ ವಿಕಾಸ ಪರಿಷತ್ ಸಂಸ್ಥಾಪಕರಾದ ಶ್ರೀ ಸಿ. ಕೆ. ಹೆಚ್. ಶಾಸ್ತ್ರೀ (ಕಡಣಿ) ಇವರು ವಹಿಸಿಕೊಳ್ಳುವರು. ಖ್ಯಾತ ಸಾಹಿತಿಗಳು, ಆಕಾಶವಾಣಿ ಧಾರವಾಡ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಬಸು ಬೇವಿನಗಿಡದ, ಹಿರಿಯ ರಂಗ ನಿರ್ದೇಶಕಿ, ಗಾಯಕಿ ಶ್ರೀಮತಿ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ, ಧಾರವಾಡ ಮತ್ತು ಸಾಹಿತಿ, ಕಲಾವಿದ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಲಲಿತಕಲಾ ಹಾಗೂ ಸಂಗೀತ ಮಾಹಾವಿದ್ಯಾಲಯ, ಪ್ರಾಧ್ಯಾಪಕ ಡಾ. ಎ. ಎಲ್. ದೇಸಾಯಿ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ
ಇದೇ ಸಂದರ್ಭದಲ್ಲಿ, ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾದ, ಬೆಂಗಳೂರಿನ ಡಾ. ಗೋಪಾಲ ಕೆ. ರಾಯಚೂರ. ಧಾರವಾಡದ, ಡಾ. ಪರಶುರಾಮ ಕಟ್ಟಿಸಂಗಾವಿ. ಆಕಾಶವಾಣಿ ಮತ್ತು ದೂರದರ್ಶನ ಸುಗಮ ಸಂಗೀತ ಕಲಾವಿದೆ ಹಳಿಯಾದ ಶ್ರೀಮತಿ ಸುಮಾ ಹಡಪದ, (ದ.ಕ). ಯುವ ಕಲಾವಿದ, ಸಂಗೀತ ಶಿಕ್ಷಕ ಗದಗ ಜಿಲ್ಲೆಯ ಡಂಬಳದ ಬಸವರಾಜ ಎನ್. ಸಿದ್ದಣ್ಣನವರ ಮತ್ತು ಸಂಗೀತ ನೃತ್ಯ ಕಲಾ ಶಿಕ್ಷಣ ಸಂಸ್ಥೆಗಳಾದ, ಜ್ಞಾನ ಜ್ಯೋತಿ ಕಲಾ ಬಳಗ, ಹುಬ್ಬಳ್ಳಿ. ಶ್ರೀ ರಾಜರಾಜೇಶ್ವರಿ ಸಂಗೀತ ಕಲಾ ಪಾಠ ಶಾಲೆ, ಇಟ್ಟಿಗಿ. ಸುಸ್ವರ ಸಂಗೀತ ವಿದ್ಯಾ ಸಂಸ್ಥೆ, ದಾಂಡೇಲಿ. ಶ್ರೀ ದುರ್ಗಾದೇವಿ ನಾಟ್ಯ ಶಾಲೆ, ಹಳಿಯಾಳ. ಇವರುಗಳಿಗೆ, ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ‘ಸುವರ್ಣ ಸಿರಿ ಸಮ್ಮಾನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಶಿಕ್ಷಕ, ಸಾಹಿತಿ ಶ್ರೀ ಬಸವರಾಜ ಹಡಪದ, ಬೆಳ್ಳಿಗಟ್ಟಿ-ಧಾರವಾಡ ಇವರು ಸ್ವಾಗತ ಭಾಷಣ ಮಾಡಲಿದ್ದಾರೆ. ಕವಿಯತ್ರಿ ಶ್ರೀಮತಿ ಸುಮಂಗಲಾ ಚಕ್ರಸಾಲಿ ಹಳಿಯಾಳ ನಿರೂಪಣೆ ಮಾಡುವರು. ಆಮಂತ್ರಿತ ಆಹ್ವಾನಿತ ಮತ್ತು ಪ್ರಶಸ್ತಿ ಪುರಸ್ಕೃತ ಕಲಾವಿದರಿಂದ ದಿನಪೂರ್ತಿ ಸಂಗೀತ ನೃತ್ಯ ಕಲಾ ಪ್ರದರ್ಶನ ಆಯೋಜಿಸಲಾಗಿದೆ ಆಸಕ್ತ ಸಂಗೀತ ಮತ್ತು ನೃತ್ಯ ಶಾಲೆಯ ಮಕ್ಕಳು ಭಾಗವಹಿಸಬಹುದಾಗಿದೆ ಮತ್ತು ತನು ಮನ ಧನದ ಭಕ್ತಿ ಸೇವೆ ಸಲ್ಲಿಸಿ ಗುರು ಕೃಪೆಗೆ ಪಾತ್ರರಾಗ ಬೇಕೆಂದು ಕಲಾ ವಿಕಾಸ ಪರಿಷತ್ ಸಂಸ್ಥಾಪಕ ಸಿ. ಕೆ. ಹೆಚ್. ಶಾಸ್ತ್ರೀ (ಕಡಣಿ) ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.



ಸಿ. ಕೆ. ಹೆಚ್. ಶಾಸ್ತ್ರೀ (ಕಡಣಿ)
ಸಂಸ್ಥಾಪಕರು
ಕಲಾ ವಿಕಾಸ ಪರಿಷತ್ (ರಿ) ಗದಗ

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಗಡಿಗಳ ಬೀಗ ಮುರಿದು ಕಳವು: ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಬಂಧನ : ಸಾಹಿಲ್ ಬಾಗ್ಲಾ ======ರಸಗೊಬ್ಬರ ಅಕ್ರಮ ದಾಸ್ತಾನು: ಕೃಷಿ ಅಧಿಕಾರಿಗಳ ಮಿಂಚಿನ ದಾಳಿ ₹1.80 ಲಕ್ಷ ಮೌಲ್ಯದ 680 ಚೀಲ ವಶ; ಸಿರಿಗೇರಿ ಠಾಣೆಯಲ್ಲಿ ಪ್ರಕರಣಇಲಾಖೆ ನಿಯಮಾನುಸಾರ ಶಾಂತಿ ಸು ವ್ಯವಸ್ಥೆಯೊಂದಿಗೆ  ಶ್ರೀ ಗೌರಿ ಗಣೇಶ ಹಬ್ಬ ಆಚರಿಸಿ : ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ .ಡಿ ಪನ್ನೇಕರ್ ಕರೆಬದಲಿ ಕೃಷಿ ಕ್ರಾಂತಿ: ‘ದೃಢ ಕರ್ನಾಟಕ ಸಂಕಲ್ಪ’ ದಡಿ ಸಾಗುತ್ತಿದೆ ಪ್ರಗತಿಯ ರಥ ಭೂಮಿ, ನೀರು ಮತ್ತು ತಂತ್ರಜ್ಞಾನದ ಸಂಗಮ: ಸರ್ಕಾರದ ನೂರು ದಿನಗಳ ಪಯಣದಲ್ಲಿ ಅನ್ನದಾತನ ಬದುಕಿಗೆ ಹೊಸ ಭರವಸೆ ನೇಗಿಲ ಯೋಗಿಯಿಂದ ಡಿಜಿಟಲ್ ಮಿಷನ್‌ವರೆಗೆ: ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿರುವ ದೃಢ ಸರ್ಕಾರದ ನೂತನ ಉಪಕ್ರಮಗಳುಮನೆ ಬಾಗಿಲಿಗೆ ನಮ್ಮ ಸರ್ಕಾರ: ಗುಡೇಕೋಟೆ ಹೋಬಳಿಯಲ್ಲಿ ಇಂದು ಪ್ರಜಾ ಆಂದೋಲನ ವಿಶೇಷ ಕಾರ್ಯಕ್ರಮಸಮ್ಮೇಳನ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಡಾ  ಮಧುಸೂದನ ಕಾರಿಗನೂರ ಬಹಿರಂಗ ಸಮಾವೇಶ: ಬಳ್ಳಾರಿ ನಗರದಲ್ಲಿ ಮದ್ಯ ಮಾರಾಟ, ಸಾಗಣೆ ಸಂಪೂರ್ಣ ನಿಷೇಧಬಹಿರಂಗ ಸಮಾವೇಶ: ಬಳ್ಳಾರಿ ನಗರದಲ್ಲಿ ಮದ್ಯ ಮಾರಾಟ, ಸಾಗಣೆ ಸಂಪೂರ್ಣ ನಿಷೇಧಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಾರ್ವಜನಿಕ ಸಮಾವೇಶ: ಜಿಲ್ಲಾಡಳಿತದಿಂದ ಷರತ್ತುಬದ್ಧ ಅನುಮತಿವಾರಣಾಸಿಯ ಗಂಗಾ ಆರತಿಯ ಮಾದರಿಯಲ್ಲಿ ಶ್ರೀಕ್ಷೇತ್ರ ಹುಲಿಗಿಯಲ್ಲಿ ತುಂಗಭದ್ರಾ ಆರತಿ ಮಹೋತ್ಸವ ಸಂಭ್ರಮ ----